ಮಡಿಕೇರಿ, ಫೆ. 27 : ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸರ್ಕಲ್ ಬಳಿ ಯಿರುವ ನಗರಸಭೆಯ ಉದ್ಯಾನ ವನವನ್ನು ನಿರ್ವಹಣೆಗಾಗಿ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆ ವಹಿಸಿಕೊಂಡಿದ್ದು, ಇದಕ್ಕೆ ರೋಟರಿ ಜಿಲ್ಲಾ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಉದ್ಯಾನವನವನ್ನು ವಿದ್ಯುಕ್ತವಾಗಿ ಉದ್ಗಾಟಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಸುರೇಶ್ ಚಂಗಪ್ಪ, ರೋಟರಿ ಜಿಲ್ಲೆ 3181 ನಲ್ಲಿ ಈ ಬಾರಿ ಪರಿಸರ ಸಂಬಂಧಿತ ಯೋಜನೆಗಳಿಗೆ ಆದ್ಯತೆ ನೀಡಲಾಗಿದ್ದು ಅಂತೆಯೇ ಮಿಸ್ಟಿ ಹಿಲ್ಸ್ ಕೂಡ ಇದೀಗ ಪ್ರಮುಖ ಉದ್ಯಾನವನದ ನಿರ್ವಹಣೆಗೆ ಮುಂದಾಗಿರುವದು ಶ್ಲಾಘನೀಯ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾಹಿತಿ ನೀಡಿ, ಹಸಿರುವನ ಯೋಜನೆಯಡಿ ನಗರಸಭೆಯ ಆಡಳಿತ ಮಂಡಳಿ, ಪೌರಾಯುಕ್ತರ ಸಹಕಾರದಿಂದ ಈ ಉದ್ಯಾನವನ್ನು ನಿರ್ವಹಣೆಗೆ ಪಡೆಯಲಾಗಿದೆ. ಮಿಸ್ಟಿ ಹಿಲ್ಸ್ ವತಿಯಿಂದ ಉದ್ಯಾನವನಕ್ಕೆ 3 ಸಿಮೆಂಟ್ ಬೆಂಚ್‍ಗಳನ್ನು ಅಳವಡಿ¸ Àಲಾಗಿದ್ದು, ಮುಂದಿನ ದಿನಗಳಲ್ಲಿ ಈ ಉದ್ಯಾನವನದಲ್ಲಿ ನಗರಸಭೆ ಸಹಕಾರದೊಂದಿಗೆ ಕಾರಂಜಿ, ಪುಪ್ಪವನ, ದೀಪಾಲಂಕಾರಕ್ಕೂ ಹಂತಹಂತವಾಗಿ ಮುಂದಾಗು ವದಾಗಿ ತಿಳಿಸಿದರು.
ರೋಟರಿ ವಲಯ ಅಸಿಸ್ಟೆಂಟ್ ಗವರ್ನರ್ ಮಹೇಶ್ ನಲ್ವಾಡೆ, ಜೋನಲ್ ಲೆಫ್ಟಿನೆಂಡ್ ಅಂಬೆಕಲ್ ವಿನೋದ್ ಕುಶಾಲಪ್ಪ, ನಗರಸಭೆಯ ಸದಸ್ಯೆ ವೀಣಾಕ್ಷಿ, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಎಂ.ಸಂದೀಪ್, ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ, ಜಿಲ್ಲಾ ಸಾರ್ಜೆಂಟ್ ಎಟ್ ಆಮ್ರ್ಸ್ ದೇವಣೀರ ತಿಲಕ್, ನಿರ್ದೇಶಕರಾದ ಕೇಶವಪ್ರಸಾದ್ ಮುಳಿಯ, ಎಂ.ಧನಂಜಯ್, ಪಿ.ಆರ್.ರಾಜೇಶ್, ರತ್ನಾಕರ್ ರೈ, ಜಿ.ಆರ್.ರವಿಶಂಕರ್, ಎಂ.ಎ.ಪೆÇನ್ನಪ್ಪ, ಶಶಿಮೊಣ್ಣಪ್ಪ, ಗಾನಾ ಪ್ರಶಾಂತ್, ಲೀನಾ ಪೂವಯ್ಯ, ಸತೀಶ್ ಸೋಮಣ್ಣ, ಡಾ.ಕುಲಕರ್ಣಿ ಹಾಜರಿದ್ದರು.
ಅಂಗನವಾಡಿಗಳಿಗೆ ಕೊಡುಗೆ
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಅಶೋಕಪುರದಲ್ಲಿನ ಅಂಗನವಾಡಿ ಮಕ್ಕಳಿಗೆ ಆಟಿಕೆ, ಕುರ್ಚಿ, ಜಮಖಾನ ಸೇರಿದಂತೆ ಅಗತ್ಯ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು. ಮಡಿಕೇರಿಯ ಪೆನ್ಶನ್‍ಲೇನ್, ಕಾನ್ವೆಂಟ್ ಜಂಕ್ಷನ್‍ಗಳಲ್ಲಿನ ಅಂಗನವಾಡಿ ಗಳಿಗೂ ಅಗತ್ಯ ಸೌಕರ್ಯಗಳ ಕೊಡುಗೆಯನ್ನು ರೋಟರಿ ಜಿಲ್ಲಾ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ, ಅಸಿಸ್ಟೆಂಟ್ ಗವರ್ನರ್ ಮಹೇಶ್ ನಲ್ವಾಡೆ ವಿತರಿಸಿದರು.
ನಗರಸಭೆಯ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್, ಸದಸ್ಯರಾದ ಪಿ.ಡಿ.ಪೆÇನ್ನಪ್ಪ, ಕೆ.ಎಸ್.ರಮೇಶ್, ವೀಣಾಕ್ಷಿ, ಅನಿತಾ ಪೂವಯ್ಯ, ಪಿ.ಟಿ.ಉಣ್ಣಿಕೃಷ್ಣ, ಸವಿತಾ ರಾಕೇಶ್, ಎ.ಲಕ್ಷ್ಮೀ ಹಾಜರಿದ್ದು ಮಿಸ್ಟಿ ಹಿಲ್ಸ್ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ರೋಟರಿ ಜೋನಲ್ ಲೆಫ್ಟಿನೆಂಟ್ ವಿನೋದ್ ಕುಶಾಲಪ್ಪ, ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ, ಕಾರ್ಯದರ್ಶಿ ಪಿ.ಎಂ.ಸಂದೀಪ್ ಸೇರಿದಂತೆ ಮಿಸ್ಟಿ ಹಿಲ್ಸ್ ನಿರ್ದೇಶಕರು, ಅಂಗನವಾಡಿ ಕೇಂದ್ರದ ಮುಖ್ಯಸ್ಥೆ ಮೀರಾ ಹಾಜರಿದ್ದರು.