ಆಲೂರು ಸಿದ್ದಾಪುರ, ಫೆ. 26: ಇತ್ತೀಚಿಗೆ ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯ ಮಾದರೆ ಹೊಸಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಬಾಲಕನೊಬ್ಬ ವಿವಸ್ತ್ರಗೊಳಿಸಿ ವೀಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಬಾಲಕಿಯ ಪೋಷಕರ ಮನೆಗೆ ಭೇಟಿ ನೀಡಿದರು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಮಕ್ಕಳ ಪೋಷಕರು ಎಚ್ಚರ ವಹಿಸಬೇಕು, ಹಾಗೂ ಇಂತಹ ಘಟನೆಗಳು ನಡೆಯುವ ಸಂದರ್ಭದಲ್ಲಿ ಪೋಷಕರು, ಅಕ್ಕಪಕ್ಕದ ಮನೆಯವರು ಹಾಗೂ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲು ಸಹಕರಿಸಬೇಕೆಂದರು. ಪ್ರಮುಖರಾದ ಜೀವನ್, ದೊರೆ, ನವೀನ್, ಸುನಿಲ್, ನಿರಂಜನ್, ಧನುಂಜಯ್, ಎಚ್.ಆರ್.ಹರೀಶ್ ಮುಂತಾದವರಿದ್ದರು.