ಮಡಿಕೇರಿ, ಫೆ. 26: ಕೊಡಗು ಜಿಲ್ಲೆ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಹೆಸರು ಪಡೆದಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಜಿಲ್ಲೆಯ ಸಂಸ್ಕøತಿ, ಸಂಪ್ರದಾಯವನ್ನು ಪರಿಚಯಿಸುವ ಮೂಲಕ ಉದ್ಯೋಗವನ್ನು ಸೃಷ್ಟಿಸಿಕೊಳ್ಳುವಂತಹ ಕೌಶಲ್ಯವನ್ನು ಮೈಗೂಡಿಸಿ ಕೊಳ್ಳುವಂತಾಗಬೇಕು ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಯೋಜನಾ ನಿಗಮವು ರೀಟ್ ಇಂಡಿಯಾ ಹಾಗೂ ಧಾತ್ರಿ ಪೌಂಡೇಶನ್ ಸಹಯೋಗದಲ್ಲಿ ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಡೆದ ಉದ್ಯಮ ಶೀಲತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕೊಡಗಿಗೆ ಪ್ರವಾಸಿಗರು ಮೋಜು, ಮಸ್ತಿಗೆ ಬರುವ ಬದಲು ಇಲ್ಲಿನ ಸಂಸ್ಕøತಿ, ಸಂಪ್ರದಾಯವನ್ನು ಕಲಿಯಲು ಬರುವಂತಾಗಬೇಕು. ಭಾರತ ಹೊರದೇಶಗಳನ್ನು ಸೈನ್ಯದ ಮೂಲಕ ಗೆದ್ದಿದ್ದಲ್ಲ. ಇಲ್ಲಿನ ಸಂಸ್ಕøತಿ ಮೂಲಕ ಗೆಲುವು ಸಾಧಿಸಿದೆ. ದೇಶದಲ್ಲಿ ಜನಸಂಖ್ಯೆ ಎಷ್ಟಿದೆಯೇ ಅಷ್ಟು ಯೋಜನೆ, ಕನಸ್ಸುಗಳು ಇವೆ. ಅವುಗಳಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರಗಳು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಕಿಲ್ ಇಂಡಿಯಾ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ದೇಶದಲ್ಲಿ 2 ಕೋಟಿಗೂ ಅಧಿಕ ಮಂದಿ ವರ್ಷ ದಲ್ಲಿ ಉದ್ಯೋಗ ಹರಸಿ ಬರುತ್ತಿದ್ದಾರೆ.

ಉದ್ಯೋಗಕ್ಕೆ ಪೂರಕವಾಗಿ ಅವರನ್ನು ತರಬೇತುಗೊಳಿಸಬೇಕಾಗಿದೆ. ಇವತ್ತು ಕಂಪ್ಯೂಟರ್ ಇಲ್ಲದಿದ್ದರೆ ಉದ್ಯೋಗವಿಲ್ಲ. ಕ್ಷಣಕ್ಷಣವೂ ತಾಂತ್ರಿಕತೆ ಬದಲಾಗುತ್ತಿದೆ. ಹಾಗಾಗಿ ನಾವು ದಿನದಲ್ಲಿ ಕನಿಷ್ಟ 20-30 ನಿಮಿಷ ಕಂಪ್ಯೂಟರ್ ಜೊತೆ ಆಟವಾಡಬೇಕಾಗಿದೆ. ಮುಂದಿನ 20-25 ವರ್ಷಗಳಲ್ಲಿ ತರಗತಿಗಳು ಇಲ್ಲದೆ ‘ಏರ್ಚುವೆಲ್’ ತರಗತಿ ಆರಂಭ ವಾಗುವ ಹಂತಕ್ಕೆ ತಾಂತ್ರಿಕತೆ ಬೆಳೆಯುತ್ತಿದೆ. ಬೆಳೆಯುತ್ತಿರುವ ತಾಂತ್ರಿಕತೆಗೆ ತಕ್ಕಂತೆ ನಾವು ನಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿ ಕೊಳ್ಳಬೇಕು. ಸ್ವೀಡನ್ ದೇಶ 22,000 ಹೆಣ್ಣು ಮಕ್ಕಳನ್ನು, ಜಪಾನ್ 3 ಲಕ್ಷ ವಿದ್ಯಾರ್ಥಿಗಳನ್ನು ಉದ್ಯೋಗ ಕ್ಷೇತ್ರದಲ್ಲಿನ ಪರಿಣತಿಗಾಗಿ ಕಳುಹಿಸಿ ಕೊಡಲು ಭಾರತ ಸರ್ಕಾರದೊಂದಿಗೆ ಕೇಳಿಕೊಂಡಿದೆ. ಅದಕ್ಕಾಗಿ ಯುª Àಜನತೆ ಕೌಶಲ್ಯತೆಯನ್ನು ರೂಢಿಸಿ ಕೊಳ್ಳಬೇಕಾಗಿದೆ ಎಂದರು.

ಅಲೋಪತಿಕ್‍ನಲ್ಲಿ ರಾಸಾಯನಿಕ ಕಾರಣದಿಂದಾಗಿ ಅನೇಕ ದುಷ್ಪರಿ ಣಾಮಗಳು ಉಂಟಾಗುತ್ತಿದೆ. ಈ ಸಂದರ್ಭ ಪ್ರಕೃತಿಯಲ್ಲಿ ಲಭ್ಯವಿರುವ ಸಸ್ಯಗಳನ್ನೇ ಬಳಸಿಕೊಂಡು ವೈದ್ಯಕೀಯ ವಿಭಾಗದಲ್ಲಿ ಇಂದಿನ ಯುವ ಪೀಳಿಗೆ ಹೊಸ ಆವಿಷ್ಕಾರ ವನ್ನು ಕಂಡು ಹಿಡಿಯುವ ಅವಕಾಶ ಗಳಿವೆ. ಆ ಮೂಲಕ ವೈದ್ಯಕೀಯ ವಿಭಾಗದಲ್ಲಿ ಉತ್ತಮ ಸಾಧನೆ ಮೂಲಕ ಯುವ ಜನಾಂಗಕ್ಕೆ ಉತ್ತಮ ಔದ್ಯೋಗಿಕ ಭವಿಷ್ಯವಿದೆ ಎಂದು ಹೇಳಿದರು.

ಓದು ಬೇರೆ, ಬದುಕು ಬೇರೆ, ಓದಿದ ಬಳಿಕ ಅನಿವಾರ್ಯವಾಗಿ ಬದುಕಿಗಾಗಿ ಬೇರೆ ಬೇರೆ ಆಯ್ಕೆ ಮಾಡಿಕೊಳ್ಳುವಂತಾಗಿದೆ. ಇದರ ಪರಿಣಾಮವಾಗಿ ನಿರುದ್ಯೋಗ ಸೃಷ್ಟಿಯಾಗಿದೆ.

(ಮೊದಲ ಪುಟದಿಂದ) ಶಾಲೆಯ ದೃಢೀಕರಣ ಪತ್ರದಿಂದ ಬದುಕು ಸಾಧ್ಯವಿಲ್ಲ. ಹಾಗಾಗಿ ಎಲ್ಲರೂ ಕೌಶಲ್ಯತೆಯನ್ನು ಹೊಂದುವ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು. ಕೌಶಲ್ಯತೆಯನ್ನು ಬೆಳೆಸಿಕೊಂಡ ಯುವ ಸಮೂಹದಿಂದ ಭವ್ಯ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಸಂಸದ ಪ್ರತಾಪ್‍ಸಿಂಹ ಮಾತನಾಡಿ, ಹಣವಿದ್ದರೂ ತಮ್ಮ ಮಕ್ಕಳನ್ನು ಕಂಪೆನಿಗಳಲ್ಲಿ ಉದ್ಯೋಗಕ್ಕೆ ಕಳುಹಿಸುತ್ತಾರೆ. ಉದ್ಯಮಶೀಲರನ್ನಾಗಿ ಬೆಳೆಸುತ್ತಿಲ್ಲ. ತಂದೆ ತಾಯಿಗಳು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ. ವಿದ್ಯಾವಂತರನ್ನಾಗಿ ಮಾಡಲು ಶ್ರಮಿಸುತ್ತಾರೆ. ತಂದೆ ತಾಯಿಗಳು ತಮ್ಮ ಮಕ್ಕಳ ಬಗ್ಗೆ ಹೆಮ್ಮೆ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಅದಕ್ಕಾಗಿ ಉದ್ಯಮಶೀಲರನ್ನಾಗಿ ಮಾಡುವ ಚಿಂತನೆಯಿಂದ ಉದ್ಯಮಶೀಲತಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಯುವ ಜನತೆಯನ್ನು ಉದ್ಯಮಶೀಲರನ್ನಾಗಿ ಮಾಡಲು ಕೇಂದ್ರ ಸರಕಾರ ಸ್ಟಾರ್ಟಪ್, ಸ್ಟಾಂಡಪ್‍ನಂತಹ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಪ್ರತೀ ಮಗುವಿಗೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಆದರೆ ಅವಕಾಶ ವಂಚಿತರಾಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಯುವ ಜನತೆಯ ಅಭಿವೃದ್ಧಿಗೆ ಚಿಂತಿಸಿ ಸಚಿವಾಲಯವನ್ನು ಆರಂಭಿಸಿದೆ. ನಾನೇನು ಆಗಬೇಕು ಎನ್ನುವ ಚಿಂತನೆ ಅಗತ್ಯ. ಪ್ರತಿಭೆಗೆ ತಕ್ಕಂತೆ ಯೋಜನೆ ರೂಪಿಸಿದಲ್ಲಿ ಭವಿಷ್ಯ ಉಜ್ವಲವಾಗಲಿದೆ ಎಂದರು. ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಪ್ರತಿಯೋರ್ವನ ವೈಯಕ್ತಿಕ ಅಭಿವೃದ್ಧಿಯನ್ನು ವಿಕಾಸಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಠ, ಛಲ ಇರಬೇಕು. ಆಗ ಅಭಿವೃದ್ಧಿ ಸಾಧ್ಯ. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಉತ್ತಮ ದಾರಿಯಲ್ಲಿ ಕಷ್ಟಪಟ್ಟು ಭವಿಷ್ಯವನ್ನು ರೂಪಿಸಿಕೊಂಡಲ್ಲಿ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬರೂ ವಿದ್ಯೆಯ ಜೊತೆಗೆ ಕೌಶಲ್ಯತೆಯನ್ನು ಮೈಗೂಡಿಸಿಕೊಳ್ಳಬೇಕೆಂದರು. ವೇದಿಕೆಯಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಧಾತ್ರಿ ಪೌಂಡೇಶನ್‍ನ ಶ್ರೀನಿವಾಸ್ ಇದ್ದರು. ರೀಟ್ ಸಂಸ್ಥೆಯ ವೆಂಕಟೇಶ್ ಕೌಶಲ್ಯತೆಯನ್ನು ಮೈಗೂಡಿಸಿಕೊಳ್ಳುವ ಬಗ್ಗೆ ವೀಡಿಯೋ ಪ್ರದರ್ಶನ ಮೂಲಕ ಮಾಹಿತಿ ನೀಡಿ ವಿದ್ಯಾರ್ಥಿಗಳು, ಯುವ ಜನತೆಯೊಂದಿಗೆ ಸಂವಾದ ನಡೆಸಿದರು. ಇದೇ ಸಂದರ್ಭ ಸಂವಾದ ವಿದ್ಯಾರ್ಥಿಗಳು ಹಾಗೂ ಯುವಜನತೆ ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಡಾ. ಅನಿತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವೆಂಕಟೇಶ್ ವಂದಿಸಿದರು.