ವೀರಾಜಪೇಟೆ, ಫೆ. 26: ಕೊಡಗಿನ ಪ್ರವಾಸೋದ್ಯಮದ ಬೆಳವಣಿಗೆಗೂ ಕೌಶಲ್ಯ ತರಬೇತಿಯ ವಿದ್ಯೆ ಸಹಕಾರಿಯಾಗಲಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೊಡಗಿನ ನೆಲದ ಮಹತ್ವವವನ್ನು ಪ್ರವಾಸಿಗರಿಗೆ ಅರಿವು ಮೂಡಿಸುವಂತಾಗಬೇಕು ಎಂದು ಕೇಂದ್ರÀ ಕೌಶಲ್ಯ ಅಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.
ಎಕ್ಸಲಸ್ ಲರ್ನಿಂಗ್ ಸಲ್ಯೂಷÀನ್ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರವನ್ನು ಇಲ್ಲಿನ ಎಸ್ ಎಸ್.ರಾಮಮೂರ್ತಿ ರಸ್ತೆಯ ಶಾನುಭಾಗ್‍ನ ನೂತನ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಉದ್ಘಾಟಸಿದ ಅನಂತಕುಮಾರ್ ಹೆಗ್ಗಡೆ ಅವರು ಜಗತ್ತು ದಿನದಿಂದ ಬದಲಾಗುತ್ತಿರುವ ಈ ಸನ್ನಿವೇಶದಲ್ಲಿ ಯುವಕರು ಮಹಿಳೆಯರು ನಿರುದ್ಯೋಗಿಗಳು ಅವರ ಅಕಾಂಕ್ಷೆಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಕೌಶಲ್ಯ ತರಬೇತಿ ಪಡೆಯುವದರಿಂದ ಸ್ವಾಭಿಮಾನ ಹಾಗೂ ಸ್ವಾವಲಂಬಿಯ ಜೀವನ ನಡೆಸಲು ಸಾಧ್ಯ ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ ಯುವಕರು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯಲ್ಲಿ ಭಾಗವಹಿಸಿ ನಿರುದ್ಯೋಗವನ್ನು ಹೋಗಲಾಡಿಸುವಂತಾಗಬೇಕು ಎಂದು ಹೇಳಿದರು. ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್, ಯೋಜನೆಯ ಎನ್.ಎಸ್.ಡಿ.ಸಿಯ ಪ್ರಮುಖ ಕೌಸ್ತವ್‍ನಾಥ್ ಉಪಸ್ಥಿತರಿದ್ದರು.
ಬಿಜೆಪಿಯ ಜಿಲ್ಲಾಧ್ಯಕ್ಷ ಭಾರತೀಶ್, ಮಾಜಿ ಅಧ್ಯಕ್ಷ ಸುಜಾಕುಶಾಲಪ್ಪ, ಕಾಫಿ ಮಂಡಳಿಯ ಉಪಾಧ್ಯಕ್ಷೆ ರೀನಾ ಪ್ರಕಾಶ್, ಆರ್‍ಎಂಸಿ ಅಧ್ಯಕ್ಷ ಸುವಿನ್ ಗಣಪತಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಸ್ನೀಂಅಕ್ತರ್, ಮಾರ್ಕೆಟಿಂಗ್ ಫೆಡರೇಶನ್ ಅಧ್ಯಕ್ಷ ಎಂ.ಚೋಟು ಕಾವೇರಪ್ಪ, ಜಿಲ್ಲಾ ಪಂಚಾಯಿತಿಯ ಸದಸ್ಯರುಗಳಾದ ಶಶಿ ಸುಬ್ರಮಣಿ, ವಿಜು ಸುಬ್ರಮಣಿ,ಕಾಂತಿ ಸತೀಶ್ ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ, ಪಂಚಾಯಿತಿ ಸದಸ್ಯರುಗಳು ಮತ್ತಿತರರು ಹಾಜರಿದ್ದರು.