ಮಡಿಕೇರಿ, ಫೆ. 26: ಇಲ್ಲಿಗೆ ಸಮೀಪದ ಬಿಳಿಗೇರಿಯ ಶ್ರೀ ಪನ್ನಂಗಾಲತಮ್ಮೆ ದೇವಿಯ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ಪೂಜೆ ಇಂದು ಬೆಳಿಗ್ಗೆ 6.50ರಿಂದ 7.50ರ ಶುಭ ಮುಹೂರ್ತದಲ್ಲಿ ನೆರವೇರಿತು. ಮೂರು ದಿನಗಳಿಂದ ದೈವಿಕ ಕೈಂಕರ್ಯಗಳನ್ನು ಈ ಸಂಬಂಧ ನೆರವೇರಿಸಲಾಯಿತು. ಮಧ್ಯಾಹ್ನ ಮಹಾಪೂಜೆಯೊಂದಿಗೆ ಅನ್ನಸಂತರ್ಪಣೆ ನೆರವೇರಿತು.
ಬಿಳಿಗೇರಿಯ ಐತಿಹಾಸಿಕ ಶ್ರೀ ಪನ್ನಂಗಾಲತಮ್ಮೆ, ಅಯ್ಯಪ್ಪ ಕರಿಚಾಮುಂಡಿ, ಪುಲಿ ಚಾಮುಂಡಿ, ಶ್ರೀ ಕುರುಂದ ಸಹಿತ ಕುದುರೆ ದೇವರುಗಳ ವಾರ್ಷಿಕೋತ್ಸವ ತಾ. 27 ರಂದು (ಇಂದು) ನೆರವೇರುವದ ರೊಂದಿಗೆ ತಾ. 23ರಿಂದ ಆರಂಭ ಗೊಂಡಿರುವ ದೇವತಾ ಕಾರ್ಯಗಳಿಗೆ ತೆರೆಬೀಳಲಿದೆ. ಕಳೆದ ನಾಲ್ಕು ದಿನಗಳಿಂದ ಜರುಗಿದ ದೇವತಾಕಾರ್ಯಗಳಲ್ಲಿ ಬಿಳಿಗೇರಿ ಸುತ್ತಮುತ್ತಲಿನ ಗ್ರಾಮಸ್ಥರ ಸಹಿತ ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.