ಒಡೆಯನಪುರ, ಫೆ. 24: ಇಲ್ಲಿನ ಶ್ರೀ ಮಂಜುನಾಥ ಯುವಕ ಸಂಘದ ವತಿಯಿಂದ ಮಾ. 3 ಮತ್ತು 4 ರಂದು ಗೋಪಾಲಪುರ ಸರಕಾರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಪ್ರಥಮ ವರ್ಷದ ಫುಟ್ಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದ್ದು, ವಿಜೇತ ತಂಡಕ್ಕೆ ರೂ. 20 ಸಾವಿರ ನಗದು ಮತ್ತು ಟ್ರೋಫಿ ಹಾಗೂ ದ್ವಿತೀಯ ಬಹುಮಾನವಾಗಿ ರೂ. 10 ಸಾವಿರ ನಗದು ಮತ್ತು ಟ್ರೋಫಿಯನ್ನು ನೀಡಲಾಗುವದೆಂದು ಸಂಘದ ಪ್ರಕಟಣೆ ತಿಳಿಸಿದೆ.