ಮಡಿಕೇರಿ, ಫೆ. 24: ಕೆಪಿಸಿಸಿಯ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಂಯೋಜಕರನ್ನಾಗಿ ಮಡಿಕೇರಿಯ ಹಿರಿಯ ಕಾಂಗ್ರೆಸ್ಸಿಗ ಎಂ.ಎ. ಉಸ್ಮಾನ್ ಅವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಆದೇಶದ ಪ್ರತಿಯನ್ನು ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ವೈ. ಸಯ್ಯದ್ ಅಹ್ಮದ್ ಹಸ್ತಾಂತರಿಸುವ ಸಂದರ್ಭ ಉಪಾಧ್ಯಕ್ಷ ಮುಜೈóದ್ ಪಾಷ, ಕೊಡಗು ಜಿಲ್ಲಾಧ್ಯಕ್ಷ ಕೆ.ಎ. ಯಾಕುಬ್, ಉಪಾಧ್ಯಕ್ಷ ಪಿ.ಸಿ. ಹಸೈನಾರ್, ಬ್ಯಾಡಗೊಟ್ಟ ಮೊಹಮ್ಮದ್, ಕೂಡಿಗೆ ಅಬ್ದುಲ್ ಖಾದರ್, ಬೇಳೂರು ಯುವ ಕಾಂಗ್ರೆಸ್ ಅಧ್ಯಕ್ಷ ಕೀರ್ತಿ ಮತ್ತಿತರರು ಉಪಸ್ಥಿತರಿದ್ದರು.