*ಗೋಣಿಕೊಪ್ಪಲು, ಫೆ. 14 : ಕುಡಿದ ಅಮಲಿನಲ್ಲಿ ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ ಅಮಾನುಷ ಘಟನೆ ಮಾಯಮುಡಿ ಪಂಚಾಯಿತಿ ವ್ಯಾಪ್ತಿಯ ಮಡಿಕೆಬೀಡು ಗ್ರಾಮದಲ್ಲಿ ನಡೆದಿದೆ. ಜೇನು ಕುರುಬರ ರಾಣಿ (50) ಕೊಲೆಯಾದ ದುರ್ದೈವಿ ಯಾಗಿದ್ದು, ಆಕೆಯ ಎರಡನೇ ಪತಿ ಕೃಷ್ಣ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಮಂಗಳವಾರ ರಾತ್ರಿ ಕುಡಿದು ಮನೆಗೆ ಬಂದ ಕೃಷ್ಣ ಹೆಂಡತಿಯೊಡನೆ ಜಗಳಕ್ಕೆ ನಿಂತಿದ್ದಾನೆ. ಇದು ಮಿತಿಮೀರಿದಾಗ ಪಕ್ಕದಲ್ಲೇ ಇದ್ದ ಕತ್ತಿಯಿಂದ ಹೆಂಡತಿಯ ಕತ್ತು ಸೀಳಿ ಕೊಂದು ನೆರಮನೆಯವರಲ್ಲಿ ‘‘ನಾನು ಕೊಲೆ ಮಾಡಿದ್ದೇನೆ’’ ಎಂದು ಹೇಳಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಪೆÇನ್ನಂಪೇಟೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಪೆÇಲೀಸ್ ಠಾಣಾಧಿಕಾರಿ ಮಹೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟ ರಾಣಿಯ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.