ವೀರಾಜಪೇಟೆ, ಫೆ. 14: ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೀತಿಯಂಡ ಕೆ. ಬೋಪಣ್ಣ ಹಾಗೂ ಕಾರ್ಯದರ್ಶಿಯಾಗಿ ಜಿ. ಆರ್. ದೀವಿಕ ಆಯ್ಕೆ ಗೊಂಡಿದ್ದಾರೆ.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಅಧ್ಯಕ್ಷತೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಉಪಾಧ್ಯಕ್ಷರಾಗಿ ಪಿ.ಎ. ಲೋಕೇಶ್, ಖಾಜಂಚಿಯಾಗಿ ಸುನಿಲ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಜಿ.ಆರ್. ಸುಮ ಹಾಗೂ ನಿರ್ದೇಶಕರುಗಳಾಗಿ ಸತ್ಯ, ಜಾಫರ್, ವಿಷೇಶ್, ನಿಕಿಲ್, ಸುಶ್ಮಿತ, ರತೀಶ್, ವಿನಯ್, ಶೃತಿ, ಮಂಜು, ಮತ್ತು ಶುಭ ಆಯ್ಕೆಗೊಂಡಿದ್ದಾರೆ. ಸಭೆಯಲ್ಲಿ ಸಂಘದ ಸಂಚಾಲಕ ಎಂ.ಎನ್. ವನಿತ್ ಕುಮಾರ್ ಉಪಸ್ಥಿತರಿದ್ದರು.