ಕೂಡಿಗೆ, ಫೆ. 12: ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಶಿವರಾತ್ರಿ ಪ್ರಯುಕ್ತ ಗುಮ್ಮನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪ್ಪಚ್ಚುರಂಜನ್ ಇಂತಹ ಕ್ರೀಡಾಕೂಟಗಳಲ್ಲಿ ಯುವಕರು ಪಾಲ್ಗೊಂಡಾಗ ಒಗ್ಗೂಡಿಕೆಯ ಜೊತೆಗೆ ಸಾಮರಸ್ಯವನ್ನು ಬೆಸೆಯುತ್ತದೆ. ಯುವಕರು ಸಮಾಜದ ಬೆಳವಣಿಗೆಗೆ ಸಹಕಾರಿಗಳಾಗಬೇಕು ಎಂದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಆರ್.ಮಂಜುಳಾ, ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭವ್ಯ, ಉಪಾಧ್ಯಕ್ಷ ತಾರನಾಥ್, ಸದಸ್ಯರಾದ ಅರುಣಚಂದ್ರ, ಸರಸ್ವತಿ ರವಿ, ಅಬ್ದುಲ್ ಖಾದರ್, ಜಗದೀಶ್, ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ, ಗುಮ್ಮನಕೊಲ್ಲಿಯ ಸರೋಜ ಬಸವರಾe ಮತ್ತು ಜಯರಾಜ್, ಶ್ರೀ ಬಸವೇಶ್ವರ ಯುವಕ ಸಂಘ ಅಧ್ಯಕ್ಷ ಮಣಿ, ಪದಾಧಿಕಾರಿಗಳಾದ ಧನಪಾಲ, ನವೀನ, ಅನುದೀಪ್, ಮನೋಹರ ಹಾಗೂ ಸರ್ವ ಸದಸ್ಯರು ಇದ್ದರು.