ಮಡಿಕೇರಿ, ಫೆ. 12: ಜಿಲ್ಲೆಯ ಹಲವು ರಸ್ತೆ ಮತ್ತು ಸೇತುವೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರವು ಹಣ ಬಿಡುಗಡೆ ಮಾಡಿರುವದಾಗಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ತಿಳಿಸಿದ್ದಾರೆ.ಮಡಿಕೇರಿ ತಾಲೂಕಿನ ಹುಣಸೂರು - ತಲಕಾವೇರಿ ರಾಜ್ಯ ಹೆದ್ದಾರಿಯಲ್ಲಿ ಮರಂದೋಡದಲ್ಲಿ ಸೇತುವೆ ನಿರ್ಮಾಣಕ್ಕೆ ರೂ. 75 ಲಕ್ಷ. ಕೊಣನೂರು - ಮಾಕುಟ್ಟ ಹೆದ್ದಾರಿಯಲ್ಲಿ 69.90 ಕಿ.ಮೀ.ನಲ್ಲಿ ಸಂಪರ್ಕ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ರೂ. 75 ಲಕ್ಷ. ಪೊನ್ನಂಪೇಟೆ - ಈಚೂರು-ಹಾತೂರು ರಸ್ತೆಯ 9.80 ಕಿ.ಮೀ.ನಲ್ಲಿ ಸೇತುವೆಯ ಪುನರ್ ನಿರ್ಮಾಣಕ್ಕೆ ರೂ. 50 ಲಕ್ಷ, ಬಾಳೆಲೆ-ಕೋಣನಕಟ್ಟೆ ರಸ್ತೆಯಲ್ಲಿ ಕೀರೆ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕಾಗಿ ರೂ. 75 ಲಕ್ಷ ಹಾಗೂ ಹರಿಹರದಿಂದ ಬಲ್ಯಮಂಡೂರು ರಸ್ತೆಯ 7.5 ಕಿ.ಮೀ.ನಲ್ಲಿ ಲಕ್ಷ್ಮಣ ತೀರ್ಥ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ರೂ. 70 ಲಕ್ಷ ಮಂಜೂರು ಮಾಡಲಾಗಿದೆ.