ಶ್ರೀಮಂಗಲ, ಫೆ. 12: ಕೃಷಿಯೊಂದಿಗೆ ಬೆರೆತುಕೊಂಡಿರುವ ಕೊಡವ ಸಂಸ್ಕøತಿ ಮತ್ತು ಪರಂಪರೆ ಉಳಿಸಿ ಬೆಳೆಸಲು ಕೊಡವರ ಜನಸಂಖ್ಯೆ ಹೆಚ್ಚಾಗಬೇಕು, ಭತ್ತದ ಕೃಷಿಯನ್ನು ಸಹ ಹಿಂದಿನಂತೆಯೇ, ರೂಢಿಸಿಕೊಳ್ಳುವ ಮೂಲಕ ಸಂಸ್ಕøತಿಯನ್ನು ಬೆಳೆಸಿಕೊಳ್ಳಬೇಕೆಂದು ಹುದಿಕೇರಿ ಕೊಡವ ಸಮಾಜದ ಸ್ಥಾಪಕ ಅಧ್ಯಕ್ಷ ಚಕ್ಕೇರ ಮಿಟ್ಟು ಸೋಮಯ್ಯ ಅಭಿಪ್ರಾಯಪಟ್ಟರು.ಹುದಿಕೇರಿ ಕೊಡವ ಸಮಾಜದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ‘ಪುದಿಯಕ್ಕಿ ಕೂಳ್ ಉಂಬೊ’ ಮತ್ತು ಮಂದ್‍ಗೆ ನಾಮಕರಣ ಸಮಾರಂಭದಲ್ಲಿ ಭತ್ತವನ್ನು ಒನಕೆಯಲ್ಲಿ ಕುಟ್ಟುವ ಮೂಲಕ ಅಕ್ಕಿ ಮಾಡುವ ಸಂಪ್ರದಾಯ ಮತ್ತು ಮಂದ್‍ನ ಹೆಸರಿನ ಫಲಕÀವನ್ನು ಅನಾವರಣ ಮಾಡಿ ಮಾತನಾಡಿದರು.

ಮಧ್ಯ ವಯಸ್ಸಿನವರು ಹಾಗೂ ಮಕ್ಕಳಿಗೆ ಕೊಡವ ಸಂಸ್ಕøತಿಯ ಬಗ್ಗೆ ಮನವರಿಕೆ ಮಾಡಬೇಕಾಗಿದೆ ಎಂದು ಹೇಳಿದ ಅವರು ಬಹು ಸಂಖ್ಯಾತರ ನಡುವೆ ಅಲ್ಪಸಂಖ್ಯಾತ ಕೊಡವರು ಸಮಾಜದಲ್ಲಿ ತಮ್ಮ ಸಂಸ್ಕøತಿ ಹಾಗೂ ನೆಲವನ್ನು ಕಾಪಾಡಿಕೊಳ್ಳಲು ಒಗ್ಗಟ್ಟು ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಜನಾಂಗದ ಹಿತಾಶಕ್ತಿಗೆ ಧಕ್ಕೆಯಾಗಲಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೋದಂಡ ಸನ್ನು ಉತ್ತಪ್ಪ ತಮ್ಮ ಗದ್ದೆಯನ್ನು ಪಾಳು ಬಿಟ್ಟು ‘ಪುದಿಯಕ್ಕಿ ಕೂಳ್ ಉಂಬೊ’ ಕಾರ್ಯಕ್ರಮ ಮಾಡುವದರಲ್ಲಿ ಅರ್ಥವಿಲ್ಲ. ಕೊಡವ ಸಂಸ್ಕøತಿ ಯೊಂದಿಗೆ ಬೆರೆತುಕೊಂಡಿರುವ ಕೃಷಿ ಭೂಮಿಯನ್ನು ಪಾಳು ಬಿಡದೆ ಕೃಷಿ ಮಾಡುವತ್ತ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಹೇಳಿದರು.

ಹುದಿಕೇರಿ ಗ್ರಾ.ಪಂ ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ ಮಾತನಾಡಿ ಕೊಡವ ಸಂಸ್ಕøತಿ ವಿಭಿನ್ನವಾದದು. ನಮ್ಮ ಪೂರ್ವಿಕರು ಭತ್ತದ ಕೃಷಿಗೆ ಹೆಚ್ಚಿನ ಗೌರವ ನೀಡುತ್ತಿದ್ದರು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ಹಿರಿಯರು ನಡೆಸಿಕೊಂಡು ಬಂದಂತಹ ಪದ್ಧತಿಯನ್ನು ಎಂದು ಮರೆಯಬಾರದು. ಅದನ್ನು ಮುಂದಿನ ಪೀಳಿಗೆಗೆ ಆಚರಣೆಗೆ ತರಬೇಕು ಎಂದರು.

ಕೊಡವ ತಕ್ಕ ಎಳ್ತ್‍ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅವರು ಪುದಿಯಕ್ಕಿ ಕೂಳ್ ಉಂಬೊ ಕುರಿತಾಗಿ ಕೊಡವ ಸಂಸ್ಕøತಿಯ ಬಗ್ಗೆ ವಿಚಾರ ಮಂಡನೆ ಮಾಡಿದರು. ಸಮಾಜದ ಆವರಣ ದಲ್ಲಿರುವ ಮಂದ್‍ಗೆ ‘ಮಡ್‍ಕೋಡ್ ಮಂದ್’ ಎಂದು ನಾಮಕರಣ ಮಾಡಿ ನೂತನ ಫಲಕವನ್ನು ಹಿರಿಯ ಚೆಕ್ಕೇರ ಮಿಟ್ಟು ಸೋಮಯ್ಯ ಅನಾವರಣ ಮಾಡಿದರು. ಕಾರ್ಯಕ್ರಮದಲ್ಲಿ ರಿಜಿಸ್ಟರ್ ಉಮರಬ್ಬ ಪ್ರಾಸ್ತವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ತಕ್ಕ ಮುಖ್ಯಸ್ಥ ಬೊಳ್ಳಜ್ಜೀರ ಎನ್.ನಂಜಪ್ಪ, ಚೆಕ್ಕೇರ ಪಿ.ರಾಜೇಶ್, ಅಜ್ಜಿಕುಟ್ಟಿರ ಗಿರೀಶ್, ಕೊಡವ ಐರಿ ಸಮಾಜದ ಅಧ್ಯಕ್ಷ ಮೇಲತಂಡ ಎ.ರಮೇಶ್, ಅಖಿಲ ಅಮ್ಮ ಕೊಡವ ಸಮಾಜದ ಖಜಾಂಚಿ ಅಚ್ಚಿಯಂಡ ಎಸ್.ಸುನೀಲ್, ಕೆಂಬಟ್ಟಿ ಜನಾಂಗದ ಪ್ರತಿನಿಧಿ ಹೆಚ್.ಆರ್.ಗೊಂಗೆ, ಹೆಗ್ಗಡೆ ಜನಾಂಗದ ಪ್ರತಿನಿಧಿ ಕಾಟಿಕುಟ್ಟಿರ ಚಂಗಪ್ಪ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಅಕಾಡೆಮಿಯ ಸದಸ್ಯರುಗಳಾದ ಅಮ್ಮುಣಿಚಂಡ ಪ್ರವೀಣ್, ಹಂಚೇಟ್ಟಿರ ಮನು, ಐತಿಚಂಡ ರಮೇಶ್ ಉತ್ತಪ್ಪ, ಹಂಚೇಟ್ಟಿರ ಫ್ಯಾನ್ಸಿ, ಬೀಕಚಂಡ ಬೆಳ್ಯಪ್ಪ, ಮನ್ನಕಮನೆ ಬಾಲಕೃಷ್ಣ, ಬೊಳ್ಳೆಜ್ಜಿರ ಅಯ್ಯಪ್ಪ, ಕುಡಿಯರ ಶಾರದ, ಹೆಚ್.ಟಿ.ಗಣಪತಿ, ಆಪಟ್ಟೀರ ಟಾಟು ಮೊಣ್ಣಪ್ಪ, ಸುಳ್ಳಿಮಾಡ ಭವಾನಿ, ಅಜ್ಜಮಾಡ ಕುಶಾಲಪ್ಪ ಮತ್ತಿತರರು ಹಾಜರಿದ್ದರು. ಸಹಕಾರಿ ಕ್ಷೇತ್ರ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದ ಚೆಕ್ಕೇರ ಮಿಟ್ಟು ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಹುದಿಕೇರಿ ತಂಡದಿಂದ ಪುತ್ತರಿ ಕೋಲಾಟ್, ಕಾವೇರಿ ಕಾಲೇಜು ವಿದ್ಯಾರ್ಥಿನಿಯರ ನೃತ್ಯ ರೂಪಕ, ಮಂದತ್ತವ್ವ ತಂಡದಿಂದ ಗೆಜ್ಜೆತಂಡ ನೃತ್ಯ ರೂಪಕ ಹಾಗೂ ಉಮ್ಮತ್ತಾಟ್, ಖ್ಯಾತ ಕಲಾವಿದರಿಂದ ಕೊಡವ ಆರ್ಕೇಸ್ಟ್ರಾ ಕಾರ್ಯಕ್ರಮ ಜನಮನ ಸೆಳೆಯಿತು. ನೂರೇರ ಜೀವನ್ ಪ್ರಾರ್ಥಿಸಿ, ಚಂಗುಲಂಡ ಸುರಾಜ್ ಸ್ವಾಗತಿಸಿ, ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ ನಿರೂಪಿಸಿ, ಆಂಗೀರ ಕುಸುಮ ವಂದಿಸಿದರು.