ಗೋಣಿಕೊಪ್ಪ ವರದಿ, ಫೆ. 12 : ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಥಮ ವರ್ಷದ ಪಿ.ಹೆಚ್.ಡಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಮಾತಂಡ ಯಶೀಕ ಪೂವಯ್ಯ ಅವರು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು ಪಡೆದಿದ್ದಾರೆ. ರಾಜ್ಯಪಾಲರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಿಂದ 52ನೇ ಘಟಿಕೋತ್ಸವದಲ್ಲಿ ಪದಕ ಸ್ವೀಕರಿಸಿದರು. ಈಕೆ ಬೆಳ್ಳುಮಾಡು ಗ್ರಾಮದ ಮಾತಂಡ ಪ್ರಕಾಶ್ ಪೂವಯ್ಯ ಮತ್ತು ಸವಿತಾ ದಂಪತಿಯ ಪುತ್ರಿ.