ಕೂಡಿಗೆ, ಫೆ. 12: ಆದಿವಾಸಿ ನಿರಾಶ್ರಿತರ ಪುನರ್ವಸತಿ ಕೇಂದ್ರ ಬಸವನಹಳ್ಳಿಯಲ್ಲಿ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೇಂದ್ರದ ಸುರೇಶ್ ಎಂಬವರ ಪತ್ನಿ ಮಾಲಾ (22) ಮೃತಪಟ್ಟಿರುವ ದುರ್ದೈವಿ. ದಿನನಿತ್ಯದಂತೆ ತೋಟದ ಕೆಲಸ ಮುಗಿಸಿ ಬಂದು ರಾತ್ರಿಯ ಊಟದ ನಂತರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮಹಿಳೆ ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ ಎಂದು ಹಾಡಿಯ ಜನರು ತಿಳಿಸಿದ್ದಾರೆ. ದಿಡ್ಡಳ್ಳಿಯಿಂದ ಸ್ಥಳಾಂತರಗೊಂಡ ದಿನಂದಿನ ಇಲ್ಲಿಯ ವರೆಗೆ ಇಂತಹ ನಾಲ್ಕು ಪ್ರಕರಣಗಳು ನಡೆದಿವೆ ಎಂದು ಹಾಡಿಯ ಮುಖಂಡರು ತಿಳಿಸಿದ್ದಾರೆ.