ಮಡಿಕೇರಿ, ಫೆ. 11: ಕೊಡಗು ಜಿಲ್ಲೆಯ ಐತಿಹಾಸಿಕ ತೀರ್ಥ ಕ್ಷೇತ್ರ ತಲಕಾವೇರಿ ಹಾಗೂ ಭಾಗಮಂಡಲ ವನ್ನು ಸಂಪರ್ಕಿಸುವಂತೆ, ಮಳೆಗಾಲದ ಪ್ರವಾಹದಿಂದ ಅಡಚಣೆ ತಪ್ಪಿಸಲು ಶೀಘ್ರವೇ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ದೊರೆಯಲಿದ್ದು, ಈಗಾಗಲೇ ಕರ್ನಾಟಕ ಸರಕಾರದ ನಿರ್ದೇಶನದಂತೆ ಕಾವೇರಿ ನೀರಾವರಿ ನಿಗಮ ಪೂರ್ವ ಸಿದ್ಧತೆಯಲ್ಲಿ ತೊಡಗಿದೆ.‘ಶಕ್ತಿ’ಗೆ ಲಭಿಸಿರುವ ಮಾಹಿತಿ ಯಂತೆ ಮುಂದಿನ 15 ದಿನಗಳಲ್ಲಿ ಭಾಗಮಂಡಲ ಕ್ಷೇತ್ರಕ್ಕೆ ಮಳೆಗಾಲದಲ್ಲಿ ಸಂಪರ್ಕ ಸಾಧಿಸಲು ಮೂರು ಕಡೆಗಳಿಂದ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ದೊರೆಯಲಿದ್ದು, ಹೈದರಾಬಾದ್ನ ವೆಂಕಟರಾಮಯ್ಯ ಮತ್ತು ಕಂಪನಿ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದೆ.ಅಲ್ಲದೆ ಈಗಾಗಲೇ ಯೋಜನೆಯ ಸಂಬಂಧ ಕಾವೇರಿ ನೀರಾವರಿ ನಿಗಮದೊಂದಿಗೆ ಒಪ್ಪಂದ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಅಂದಾಜು ರೂ. 28.92 ಕೋಟಿಯ ಕಾಮಗಾರಿಗೆ ಹಸಿರು ನಿಶಾನೆ ದೊರೆತಿದೆ. ಪ್ರಸಕ್ತ ಇರುವ ರಸ್ತೆ ಮಾರ್ಗವನ್ನು ವಾಹನಗಳ ಸಂಚಾರಕ್ಕೆ ಬಳಸಿಕೊಂಡೇ ಯೋಜನೆ ರೂಪಿಸಲಾಗಿದೆ.
ಹಾಗಾಗಿ ಈಗಿನ ರಸ್ತೆ ಮಾರ್ಗದಿಂದ ಸರಿ ಸುಮಾರು 5.5 ಮೀಟರ್ ಎತ್ತರದಿಂದ ಈ ನೂತನ ಮೇಲ್ಸೇತುವೆ ನಿರ್ಮಾಣಗೊಳ್ಳಲಿದೆ. ಸಹಜವಾಗಿಯೇ ಕೆಳಗಿನ ರಸ್ತೆ ಮಾರ್ಗದಿಂದ ಎಂದಿನಂತೆ ವಾಹನಗಳು ಓಡಾಡಲು ಅನುಕೂಲ ದೊಂದಿಗೆ, ಜಾತ್ರಾ ಸಂದರ್ಭ ಸೇರಿದಂತೆ ಕೆಳರಸ್ತೆ ಮುಳುಗಡೆ ಸಂದರ್ಭ ಭಾಗಮಂಡಲ ಮತ್ತು ತಲಕಾವೇರಿ ಸುತ್ತಮುತ್ತಲಿನ ಜನತೆ ಹಾಗೂ ಯಾತ್ರಾರ್ಥಿಗಳಿಗೆ ತೊಂದರೆ ತಪ್ಪಿಸಲು ನೂತನ ಸೇತುವೆ ನಿರ್ಮಾಣಗೊಳ್ಳಲಿದೆ.
ಶ್ರೀ ಭಗಂಡೇಶ್ವÀರ ದೇವಾಲಯ ಹಾಗೂ ತಲಕಾವೇರಿ ಕ್ಷೇತ್ರಗಳ ಪಾವಿತ್ರ್ಯತೆ ಮತ್ತು ಸೌಂದರ್ಯಕ್ಕೆ ಎಲ್ಲೂ ಅಡಚಣೆಯಾಗದಂತೆ ಯೋಜನೆ
(ಮೊದಲ ಪುಟದಿಂದ) ರೂಪಿ ಸಿದ್ದು, ಮಡಿಕೇರಿ- ಭಾಗಮಂಡಲ, ಅಯ್ಯಂಗೇರಿ- ಭಾಗಮಂಡಲ, ತಲಕಾವೇರಿ- ಭಾಗಮಂಡಲ ಸಂಪರ್ಕ ಸೇತುವೆಯಾಗಿ ಮೂರು ಕಡೆಗಳನ್ನು ಏಕಕೇಂದ್ರಕ್ಕೆ ಸಂಪರ್ಕ ಗೊಳಿಸಿ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪೈಲ್ ಫೌಂಡೇಶನ್
ಸೇತುವೆಯ ಗುಣಮಟ್ಟ ಕಾಯ್ದುಕೊಳ್ಳಲು, ಭೂಮಿಯ ಒಳಗಡೆ ಗಟ್ಟಿಯಾದ ನೆಲೆ ಸಿಗುವ ತನಕವೂ ಕೊರೆದು ಪೈಲ್ ಫೌಂಡೇಶನ್ ನಿರ್ಮಾಣದಿಂದ ಸೇತುವೆಯ ತಳಪಾಯ ಕಾಪಾಡಿಕೊಳ್ಳಲಾಗುವದು. ಇಂತಹ ಸುಸಜ್ಜಿತ 196 ಕಂಬಗಳ ಸಹಾಯದಿಂದ ಮೇಲ್ಸೇತುವೆ ನಿಲ್ಲಲಿದೆ.
ಇನ್ನೊಂದೆಡೆ ರಸ್ತೆಯಿಂದ 5.5. ಮೀಟರ್ ಎತ್ತರದಿಂದ ಹಾದು ಗೋಗುವಂತೆ ರಚನೆಗೊಳ್ಳಲಿರುವ ಮೇಲ್ಸೇತುವೆಯು ಎರಡು ಕಡೆಗಳಲ್ಲಿ ತಡೆಗೋಡೆ ಹಾಗೂ ರ್ಯಾಂಪ್ ಅಳವಡಿಕೆಯೊಂದಿಗೆ ಸುಮಾರು 1.7 ಮೀಟರ್ನಷ್ಟು ಏರಲಿದ್ದು, ಈ ಎಲ್ಲಾ ಯೋಜನೆ ಸರಿ ಸುಮಾರು 7.2 ಮೀಟರ್ನಿಂದ ಗರಿಷ್ಟ 9 ಮೀಟರ್ ನೊಳಗೆ ಇರಲಿದೆ ಎಂದು ಗೊತ್ತಾಗಿದೆ.
ಅತಿಕ್ರಮಣ ತೆರವು: ಭಾಗಮಂಡಲದ ಮೂರು ದಿಕ್ಕಿನಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಶೀಘ್ರ ಚಾಲನೆ ದೊರೆಯಲಿದ್ದು, ಆ ಮುನ್ನ ಈ ಕೆಲಸಕ್ಕೆ ಅಡಚಣೆಯಾಗ ದಂತೆ ಸಾಕಷ್ಟು ವಿದ್ಯುತ್ ಕಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಿ, ಸಂಪರ್ಕ ಮಾರ್ಗ ಬದಲಾಯಿಸಬೇಕಿದೆ. ಇನ್ನೊಂದೆಡೆ ಸಾಕಷ್ಟು ಅಂಗಡಿ ಇತ್ಯಾದಿ ದೇಗುಲ ಜಾಗದಲ್ಲಿ ತಲೆಯೆತ್ತಿದ್ದು, ಅವುಗಳನ್ನು ಕೂಡ ಕಾಮಗಾರಿಗೆ ಮುನ್ನ ತೆರವುಗೊಳಿಸಬೇಕಿದೆ. ಈ ದಿಸೆಯಲ್ಲಿ ಕಾವೇರಿ ನೀರಾವರಿ ನಿಗಮದೊಂದಿಗೆ ವಿವಿಧ ಇಲಾಖೆಗಳು, ಜಿಲ್ಲಾಡಳಿತ, ಜನಪ್ರತಿನಿಧಿಗಳು ಸಮಾಲೋಚಿಸಿ ಮುಂದಿನ 15 ದಿನಗಳಲ್ಲಿ ಮೇಲ್ಸೇತುವೆಗೆ ಪ್ರಾರಂಭಿಕ ಚಾಲನೆ ದೊರೆಯುವ ವಿಶ್ವಾಸವನ್ನು ನೀರಾವರಿ