ವೀರಾಜಪೇಟೆ, ಫೆ. 11: ಕಡಂಗ ಗ್ರಾಮದ ಎಸ್.ಕೆ.ಎಸ್.ಎಸ್.ಎಫ್. ಕಡಂಗ ಶಾಖೆಯ ನೂತನ ಅಧ್ಯಕ್ಷರಾಗಿ ಪಿ.ಹೆಚ್. ಶಮೀರ್, ಉಪಾಧ್ಯಕ್ಷರಾಗಿ ಪಿ.ಕೆ. ರಜಾಕ್, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎ.ಇಕ್ಬಾಲ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಟಿ.ಎಂ. ರಹೀಂ, ಖಜಾಂಚಿಯಾಗಿ ಕೆ.ಕೆ. ಸಮದ್, ವಿವಿಧ ಘಟಕಗಳ ಕಾರ್ಯದರ್ಶಿಗಳಾಗಿ ರಿಯಾಜ್ ಬಾಕವಿ, ಪಿ.ಕೆ. ಸಿದ್ಧಿಕ್, ಸಿ.ಕೆ. ಹಬೀದ್ ಬಿ.ಎ. ಹರ್ಷ ಆಯ್ಕೆಯಾಗಿದ್ದಾರೆ.

ವಾರ್ಷಿಕ ಮಹಾ ಸಭೆ: ಎಸ್.ಕೆ.ಎಸ್.ಎಸ್.ಎಫ್. ಕಡಂಗ ಶಾಖೆ ವಾರ್ಷಿಕ ಮಹಾಸಭೆ ಕಡಂಗದ ಎಂ.ಯು. ಮದರಸ ಸಭಾಂಗಣದಲ್ಲಿ ಉಮ್ಮರ್ ಫೈಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಸಾಲಿನ ವರದಿ ಹಾಗೂ ಲೆಕ್ಕ ಪರಿಶೀಲನೆ ಮಾಡಿ ಸಭೆ ಅಂಗೀಕರಿಸಿತು. ಸಭೆಯಲ್ಲಿ 2018-19ರ ಸಾಲಿಗೆ ನೂತನ ಆಡಳಿತ ಮಂಡಳಿಯನ್ನು ಚುನಾಯಿಸಿ ಅಧಿಕಾರವನ್ನು ಹಸ್ತಾಂತರಿಸಲಾಯಿತು.