ಸೋಮವಾರಪೇಟೆ,ಫೆ.12: ಇಂಡೋನೇಷಿಯಾದ ಪಾಲೆಂಬರ್ಗ್‍ನ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಇನ್ವಿಟೇಷನ್ ಟೂರ್ನಮೆಂಟ್‍ನಲ್ಲಿ ಸೋಮವಾರಪೇಟೆಯ ಜೀವನ್ ಭಾಗವಹಿಸಿದ್ದು, ಅಥ್ಲೆಟಿಕ್ಸ್‍ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

4/400 ಮೀಟರ್ ರಿಲೇ ನಲ್ಲಿ ತೇರ್ಗಡೆಯಾಗಿರುವ ಜೀವನ್, ತನ್ನ ಸಹಪಾಠಿ ಮೂವರೊಂದಿಗೆ ಕ್ರೀಡಾಕೂಟದಲ್ಲಿ ಸ್ಥಾನ ಪಡೆದಿದ್ದಾರೆ. ಜೀವನ್ ಅವರಿಗೆ ಅಮೇರಿಕಾದ ಗಲೀನಾ ಅವರು ಪಂಜಾಬ್‍ನ ಪಾಟಿಯಾಲದಲ್ಲಿರುವ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಿದ್ದಾರೆ.

ಸೋಮವಾರಪೇಟೆ ತಾಲೂಕಿನ ಕಾರೇಕೊಪ್ಪ ಕೆ.ಪಿ. ಸುರೇಶ್ ಮತ್ತು ಶಕುಂತಲ ದಂಪತಿಗಳ ಪುತ್ರನಾಗಿದ್ದು, ಪ್ರಸ್ತುತ ಬೆಂಗಳೂರಿನ ಕೇಂದ್ರ ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ.