ವೀರಾಜಪೇಟೆ. ಫೆ. 9: ಹೊಸೂರು ಬೆಟ್ಟಗೇರಿ ಕಳತ್ಮಾಡು ಶ್ರೀ ಮಹಾದೇವರ ಸ್ವಾಮಿಯ ವಾರ್ಷಿಕ ಮಹೋತ್ಸವ ತಾ.10 ರಿಂದ (ಇಂದಿನಿಂದ) ತಾ.15ರವರೆಗೆ ಹಲವು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ತಾ. 13 ಮತ್ತು 14ರಂದು ತುಲಾಭಾರ ಸೇವೆಗಳು ದೇವಾಲಯದಲ್ಲಿ ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.