ಕುಶಾಲನಗರ, ಫೆ. 9: ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಶುಕ್ರವಾರ ವರ್ಷದ ಮೊದಲ ಮಳೆ ಸಿಂಚನವಾಗಿದೆ. ಮಧ್ಯಾಹ್ನದಿಂದಲೇ ತುಸು ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆ ಬಿದ್ದಿದೆ.ಪಟ್ಟಣ ಸೇರಿದಂತೆ ಕೂಡಿಗೆ, ಕೊಪ್ಪ, ಗುಡ್ಡೆಹೊಸೂರು ಭಾಗಗಳಲ್ಲಿ ಮಳೆಯಾದ ವರದಿಯಾಗಿದ್ದು ಸುಡುಬಿಸಿಲಿನ ನಡುವೆ ವಾತಾವರಣ ಮರೆಯಾಗಿ ಶೀತಗಾಳಿ ನಿರ್ಮಾಣಗೊಂಡಿದ್ದು ಕಂಡುಬಂದಿತು.