ಮಡಿಕೇರಿ, ಫೆ. 8: ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಮುಂಬೈ ಮೂಲದ ಲಾರಿಯೊಂದು (ಎಂ.ಹೆಚ್. 06 ಎಕ್ಯೂ 6100) ಕಂಟೇನರ್ ಸಮೇತ ಇಂದು ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ತಾಳತ್‍ಮನೆ ತಿರುವಿನಲ್ಲಿ ಮಗುಚಿಕೊಂಡಿದೆ. ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.