ಸುಂಟಿಕೊಪ್ಪ, ಫೆ. 8: ನಾಕೂರು-ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ತಾ. 25 ರಂದು ಕಾನ್‍ಬೈಲ್ ಪ್ರಾಥಮಿಕ ಶಾಲಾ ಮೈದಾನದಲ್ಲಿ 18ನೇ ವರ್ಷದ ಕ್ರೀಡೋತ್ಸವ ನಡೆಯಲಿದೆ.
ಪುರುಷರಿಗೆ ಮುಕ್ತ ಕಬಡ್ಡಿ ಪಂದ್ಯಾಟ, ರಸ್ತೆ ಓಟ, ಮಹಿಳೆಯರಿಗೆ ಪಾಸಿಂಗ್‍ದ ಬಾಲ್, ಬಾಂಬ್ ಇನ್‍ದ ಸಿಟಿ ಸ್ಪರ್ಧೆ ಮಹಿಳೆಯರು ಹಾಗೂ ಪುರುಷರಿಗೆ ಹಗ್ಗಜಗ್ಗಾಟ 5 ವರ್ಷ ಒಳಗಿನ ಪ್ರಾಯದ ಮಕ್ಕಳಿಗೆ ಕಾಳು ಹೆಕ್ಕುವದು, ಕಪ್ಪೆ ಜಿಗಿತ, ಗೋಣಿಚೀಲ ಜಿಗಿತ ಸ್ಪರ್ಧೆಗಳನ್ನು ಏರ್ಪಡಿಸ ಲಾಗಿದೆ. ಅಂದು ಸಂಜೆ 5.30 ಗಂಟೆ ನಂತರ ಸ್ಥಳೀಯರಿಗೆ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಡ್ಯಾನ್ಸ್ ಮೇಳವನ್ನು ಏರ್ಪಡಿಸ ಲಾಗಿದೆ. ಹೆಚ್ಚಿನ ವಿವರಗಳಿಗೆ ದೂರವಾಣಿ 9481765075, 9449092405 ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ.