ಮಡಿಕೇರಿ, ಫೆ.8 : ಜಾತ್ಯತೀತ ಜನತಾದಳ ಪಕ್ಷದ ಕನಿಷ್ಟ ಪ್ರಾಥಮಿಕ ಸದಸ್ಯತ್ವವನ್ನು ಹೊಂದದೆ ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರ ವಿರುದ್ಧ ಹೇಳಿಕೆಗಳನ್ನು ನೀಡಿರುವ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ಅಧ್ಯಕ್ಷ ಚಿಲ್ಲನ ದರ್ಶನ್ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಜಿಲ್ಲಾ ಯುವ ಜನತಾದಳದ ಮಡಿಕೇರಿ ಘಟಕದ ಅಧ್ಯಕ್ಷ ರವಿ ಕಿರಣ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಕಾರ್ಯನಿರ್ವಹಿಸುವ ಅಭಿಮಾನಿ ಬಳಗದ ಬಗ್ಗೆ ತಮಗೆ ಮೆಚ್ಚುಗೆ ಇದೆ; ಆದರೆ, ಪಕ್ಷದ ಸದಸ್ಯತ್ವವನ್ನೇ ಹೊಂದದ ಅದರ ಅಧ್ಯಕ್ಷರು ಮತ್ತು ಸದಸ್ಯರಿಗೆ ಜೆಡಿಎಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವ ಯಾವದೇ ನೈತಿಕ ಹಕ್ಕಿಲ್ಲವೆಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಜೆಡಿಎಸ್ ವಕ್ತಾರ ಧನಂಜಯ ಶೆಟ್ಟಿ, ನಗರ ಪ್ರಧಾನ ಕಾರ್ಯದರ್ಶಿ ಅಜಿತ್ ಕೊಟ್ಟಕೇರಿಯನ, ಉಪಾಧ್ಯಕ್ಷ ಸುದೀಪ್ ಶೆಟ್ಟಿ, ನಗರ ಸಂಘಟನಾ ಕಾರ್ಯದರ್ಶಿ ಗೋಪಿನಾಥ್ ಹಾಗೂ ಶೇಖರ್ ಉಪಸ್ಥಿತರಿದ್ದರು.