ಮಡಿಕೇರಿ, ಫೆ. 8: ಇಲ್ಲಿನ ಮಹದೇವಪೇಟೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಾರುಕಟ್ಟೆ ಸಂಕೀರ್ಣದಲ್ಲಿ ವರ್ತಕರಿಗೆ ನೀರು, ಬೆಳಕು, ಶೌಚಾಲಯದಂತಹ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಖಾಯಂ ವರ್ತಕರು ಆಗ್ರಹಪಡಿಸಿದ್ದಾರೆ. ಕೋಟಿಗಟ್ಟಲೆ ಹಣ ವ್ಯಯಿಸಿ ನಿರ್ಮಿಸುತ್ತಿರುವ ಮಾರುಕಟ್ಟೆ ಸಂಕೀರ್ಣ ನಾಲ್ಕು ಕಡೆಗಳಿಂದ ಪ್ರವೇಶಿಸುವಂತೆ ಮೆಟ್ಟಿಲುಗಳನ್ನು ನಿರ್ಮಿಸಬೇಕೆಂದು ವರ್ತಕರು ಒತ್ತಾಯಿಸಿದರು.
ಈ ಸಂಬಂಧ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್, ನಗರಸಭೆ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್, ವಾರ್ಡ್ ಸದಸ್ಯರುಗಳಾದ ಕೆ.ಜೆ. ಪೀಟರ್ ಹಾಗೂ ತಜಸುಂ ಬಳಿ ಖುದ್ದು ಅಸಮಾಧಾನ ತೋಡಿಕೊಂಡ ಮಾರುಕಟ್ಟೆ ವ್ಯಾಪಾರಿಗಳು, ಕಳೆದ ಮೂರು ವರ್ಷಗಳಿಂದ ಮಾರುಕಟ್ಟೆಯ ವಿದ್ಯುತ್ ಬಿಲ್ ಇತ್ಯಾದಿ ತಾವೇ ಪಾವತಿಸುತ್ತಿರು ವದಾಗಿ ಬಹಿರಂಗಗೊಳಿಸಿದರು.
ನಗರಸಭೆಯಿಂದ ವರ್ತಕರಿಗೆ ಮೂಲಭೂತ ಸೌಲಭ್ಯ ಕೊರತೆಯಿಂದ ಪ್ರಸಕ್ತ ತರಕಾರಿ ಮಾರುವಲ್ಲಿ ಮೀನು ಮಾರಾಟ ನಡೆಸಲಾಗುತ್ತಿದ್ದು, ಹೊಸ ಕಟ್ಟಡಕ್ಕೆ ಏಕಮುಖ ಮೆಟ್ಟಿಲು ಸಂಪರ್ಕದಿಂದಾಗಿ ಕೆ.ಜಿ. ಗಟ್ಟಲೆ ತರಕಾರಿ ಮೂಟೆಗಳನ್ನು ಒಳಗೆ ಹೊತ್ತು ತರುವದು ಕಷ್ಟವೆಂದು ಬೊಟ್ಟು ಮಾಡಿದರು. ಆ ದಿಸೆಯಲ್ಲಿ ನಾಲ್ಕುಕಡೆಗಳಿಂದ ಬರುವ ದಾರಿ ಕಲ್ಪಿಸುವಂತೆ ಗಮನ ಸೆಳೆದರು.
ಅಲ್ಲದೆ ಹೊಸ ಕಟ್ಟಡ ಉದ್ಘಾಟನೆಗೆ