ಮಡಿಕೇರಿ, ಫೆ.8 : ಮಡಿಕೇರಿ ಲಯನ್ಸ್ ಕ್ಲಬ್ ಮತ್ತು ಮಂಗಳೂರಿನ ಯುನಿಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ತಾ.11ರಂದು ನಗರದ ಲಯನ್ಸ್ ಸಭಾಂಗಣದಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಲಯನ್ಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ನವೀನ್ ಅಂಬೆಕಲ್ ಈ ಬಗ್ಗೆ ಮಾಹಿತಿ ನೀಡಿ, ಫೆ.11 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತಜ್ಞ ವೈದ್ಯರುಗಳ ತಂಡದಿಂದ ಹೃದ್ರೋಗ ತಪಾಸಣೆ ನಡೆಯಲಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡು, ಹೆಚ್ಚಿನ ಮಾಹಿತಿಗಳಿಗಾಗಿ ಮೊ. 9538781777, 9448005642 ಅನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಲಯನ್ಸ್ ಕ್ಲಬ್ ನಿರ್ದೇಶಕರಾದ ಮೋಹನ್ ದಾಸ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರಥಮವಾಗಿ ಸ್ಥಾಪಿಸಲ್ಪಟ್ಟ ಲಯನ್ಸ್ ಕ್ಲಬ್ 53 ವರ್ಷಗಳನ್ನು ಪೂರೈಸಿದ್ದು, ಈಗಾಗಲೆ ಕ್ಲಬ್ನ ಸುವರ್ಣ ಮಹೋತ್ಸವವನ್ನು ಆಚರಿಸಲಾಗಿದೆ. ಈ ಸುದೀರ್ಘ ಅವಧಿಯಲ್ಲಿ ಮಡಿಕೇರಿ ಲಯನ್ಸ್ ಕ್ಲಬ್ ಹಾಗೂ ಇದರ ಉಪ ಶಾಖೆÉಗಳಾಗಿ ಜಿಲ್ಲೆಯಾದ್ಯಂತ ಇರುವ 11 ಲಯನ್ಸ್ ಕ್ಲಬ್ಗಳು ಸಮಾಜಮುಖಿಯಾದ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುನ್ನಡೆಯುತ್ತಿರು ವದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಲಯನ್ಸ್ ಕಾರ್ಯದರ್ಶಿ ಮಧುಕರ್, ವಲಯಾಧ್ಯಕ್ಷ ಸೋಮಣ್ಣ, ನಿರ್ದೇಶಕ ಬಾಬುಚಂದ್ರ ಉಳ್ಳಾಗಡ್ಡಿ, ಯುನಿಟಿ ಆಸ್ಪತ್ರೆಯ ಪ್ರಮುಖರಾದ ರವಿ ಮಹದೇವ್ ಉಪಸ್ಥಿತರಿದ್ದರು.