ಮಡಿಕೇರಿ, ಫೆ. 7: ಮನೆ ಮನೆಗೆ ಕುಮಾರಣ್ಣ ಅಭಿಯಾನದ ಮೂಲಕ ಕೊಡಗಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರದ ಭರವಸೆಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸುವ ಕಾರ್ಯವನ್ನು ಜಾತ್ಯಾತೀತ ಜನತಾದಳದ ವತಿಯಿಂದ ಮಾಡಲಾಗುವದೆಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ಕೊಡಗು ಉಸ್ತುವಾರಿ ಯಾಲದಾಳು ಮನೋಜ್ ಬೋಪಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನಸಭಾ ಚುನಾವಣೆಯಲ್ಲಿ ಬಹುಮತದ ಗುರಿ ಹೊಂದಿರುವ ಜಾತ್ಯಾತೀತ ಜನತಾದಳ ರಾಜ್ಯದೆಲ್ಲೆಡೆ ‘ಮನೆ ಮನೆಗೆ ಕುಮಾರಣ್ಣ’ ಅಭಿಯಾನದ ಮೂಲಕ ಕುಮಾರಸ್ವಾಮಿ ಅವರು 20 ತಿಂಗಳ ಕಾಲ ಮಾಡಿದ ಅಭಿವೃದ್ಧಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಎಂದು ಹೇಳಲಾಗುತ್ತಿದೆ ಯಾದರೂ ಜನಾಭಿಪ್ರಾಯವೇ ಅಂತಿಮವೆಂದು ಮನೋಜ್ ಬೋಪಯ್ಯ ಸ್ಪಷ್ಟಪಡಿಸಿದರು.

ತಾನೇ ಈ ಕ್ಷೇತ್ರದ ಅಭ್ಯರ್ಥಿ ಯಾಗಬೇಕೆಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಆದರೆ ಜನಾಭಿಪ್ರಾಯ ಮತ್ತು ರಾಜ್ಯದ ವರಿಷ್ಠರ ನಿಲುವು ಅಂತಿಮವಾಗಲಿದೆ ಎಂದು ತಿಳಿಸಿದರು. ಪಕ್ಷದೊಳಗಿನ ಗೊಂದಲ ಸಂಪೂರ್ಣವಾಗಿ ನಿವಾರಣೆಯಾಗಿಲ್ಲವೆಂದು ಒಪ್ಪಿಕೊಂಡ ಅವರು, ಸಂಕೇತ್ ಪೂವಯ್ಯ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಅವರ ಅಭಿಪ್ರಾಯ ಏನಿದೆ ಎನ್ನುವದನ್ನು ತಿಳಿದು ರಾಜ್ಯದ ವರಿಷ್ಠರ ಗಮನ ಸೆಳೆಯಲಾಗುವದೆಂದು ಮನೋಜ್ ಬೋಪಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷ ಕುಂಬಗೌಡನ ಜಗದೀಪ್, ಉಪಾಧ್ಯಕ್ಷ ಕುಂಬಗೌಡನ ಅರವಿಂದ್, ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷ ಸುದರ್ಶನ್, ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಅಬ್ರಾರ್ ಹಾಗೂ ಪ್ರಮುಖ ಕೆ.ಕೆ. ಹೇಮಂತ್ ಉಪಸ್ಥಿತರಿದ್ದರು.

ತಾ. 10 ರಂದು ನಗರದ ಗಾಂಧಿ ಮೈದಾನದಲ್ಲಿ ಚಾಲನೆ ನೀಡಲಾಗುತ್ತಿದ್ದು, ಮಾಜಿ ಸಚಿವ ಬಿ.ಎ.ಜೀವಿಜಯ, ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದರು. ಮೊದಲು ಎರಡು ತಂಡಗಳ ಮೂಲಕ ಅಭಿಯಾನ ನಡೆಯಲಿದ್ದು, ನಂತರದ ದಿನಗಳಲ್ಲಿ 10 ತಂಡಗಳೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವದು.

ಮಡಿಕೇರಿ ನಗರದಲ್ಲಿ ನಡೆಯುತ್ತಿರುವ ಕೋಟ್ಯಾಂತರ ರೂ.ವೆಚ್ಚದ ಯುಜಿಡಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಇದು ನಿಷ್ಪ್ರಯೋಜಕ ಯೋಜನೆಯಾಗಿದೆ. ಕಮಿಷನ್‍ಗಾಗಿ ಈ ಕಾಮಗಾರಿ ನಡೆಯುತ್ತಿದೆ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಮನೋಜ್ ಬೋಪಯ್ಯ ಆರೋಪಿಸಿದರು.