ಸುಂಟಿಕೊಪ್ಪ, ಫೆ. 7: ಸಮೀಪದ ಕಂಬಿಬಾಣೆ ಮಾಗ್‍ಡೂರ್ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ತಾ. 7 ರಿಂದ 13 ರವರೆಗೆ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದೆ.

ಇಂದು ಬೆಳಿಗ್ಗೆ 5 ಗಂಟೆಯಿಂದ ನಿರ್ಮಾಲ್ಯ ದರ್ಶನ, ಅಭಿಷೇಕ, ಉಷಾಪೂಜೆ, ಮಹಾಗಣಪತಿ ಹವನ, ಗುರುಪೂಜೆ, ಎದುರ್ತ್ ಪೂಜೆ, ಮಹಾಪೂಜೆ, ಮಹಾ ಮಂಗಳಾರತಿಯು ಶ್ರದ್ಧಾಭಕ್ತಿಯಿಂದ ನಡೆಯಿತು.

ತಾ. 8 ರಿಂದ 13 ರವರೆಗೆ ಬೆಳಿಗ್ಗೆ ಪಳ್ಳಿಯುಣರ್ಥಲ್, ನಿರ್ಮಾಲ್ಯ ದರ್ಶನ, ಅಭಿಷೇಕ, ಉಷಾಪೂಜೆ, ಮಹಾಗಣಪತಿ ಹವನ, ಗುರುಪೂಜೆ, ಎದುರ್ತ್ ಪೂಜೆ, ಮೆರವಣಿಗೆ, ನವಕಳಶ ಪೂಜೆ, ಮದ್ಯಾಹ್ನದ ಪೂಜೆ ನಂತರ ಭೂತಬಲಿ, ಸಂಜೆ 4.30ಕ್ಕೆ ಹೆಬ್ಬಾಗಿಲು ತೆರೆಯುವಿಕೆ, ಮೆರವಣಿಗೆ, ಗುರುಪೂಜೆ, ರಾತ್ರಿ 7ಕ್ಕೆ ದೀಪರಾಧನೆ, ಮೆರವಣಿಗೆ, ಅತ್ತಾಳ ಪೂಜೆ, ನಡೆಯಲಿದೆ.

ತಾ. 12 ರಂದು ರಾತ್ರಿ 10 ಗಂಟೆಯಿಂದ ಕೇರಳದ ಕಣ್ಣೂರಿನ ‘ಅಮ್ಮ ಮ್ಯೂಸಿಕ್ ಈವೆಂಟ್ಸ್’ ತಂಡದವರಿಂದ ರಸಮಂಜರಿ ಕಾರ್ಯಕ್ರಮ, ಮದ್ಯರಾತ್ರಿ ಪಳ್ಳಿವೇಟ, ಪಳ್ಳಿ ಕುರುಪ್ಪು ನಡೆಯಲಿದೆ.

ತಾ. 13ರ ಶಿವರಾತ್ರಿ ದಿನದಂದು ವಿಶೇಷ ಪೂಜಾ ಕೈಂಕಾರ್ಯಗಳು ನಡೆಯಲಿದ್ದು, ರಾತ್ರಿ 10 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯುತ್ತದೆ. ಮದ್ಯರಾತ್ರಿ 2.30ಕ್ಕೆ ಆರಾಟ್, ದ್ವಜ ಇಳಿಸುವದು, ಶುದ್ಧಿ ಕಳಶ, ಮಂಗಳಪೂಜೆ ನಡೆಯಲಿದೆ ಎಂದು ದೇವಾಲಯ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.