ಮಡಿಕೇರಿ, ಫೆ. 7: ಪ್ರಸ್ತಕ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ನಗರ ಪ್ರದೇಶದಲ್ಲಿ ಸ್ವಂತ ಮನೆ ಹೊಂದಿರುವ ಸಾರ್ವಜನಿಕರಿಗೆ 100 ಜನ ತಾರಸಿ ತೋಟ ಮತ್ತು 100 ಜನರಿಗೆ ಕೈತೋಟಕ್ಕೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಆಸಕ್ತಿಯುಳ್ಳವರು ತಾ. 7 ರಿಂದ 15 ರವರೆಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಮಡಿಕೇರಿ ಕಚೇರಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಹೆಸರು ನೋಂದಾಯಿಸಿಕೊಳ್ಳಲು ಪಾಸ್‍ಪೋರ್ಟ್ ಸೈಜಿನ ಪೋಟೋ, ಆಧಾರ್ ಕಾರ್ಡ್ ಪ್ರತಿ ಮತ್ತು ನಗರಸಭೆ ವತಿಯಿಂದ ನೀಡಲಾಗುವ ಫಾರಂ ನಂ.3, ಕಂದಾಯ ರಶೀದಿ, ವಿದ್ಯುಚ್ಛಕ್ತಿ ಬಿಲ್ಲಿನ ದಾಖಲಾತಿಗಳನ್ನು ಸಲ್ಲಿಸಬಹುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವದು ಎಂದು ಅವರು ತಿಳಿಸಿದ್ದಾರೆ.