*ಗೋಣಿಕೊಪ್ಪಲು : ಸಂಬಂಧಿಕರ ಮದುವೆಗೆ ರಜೆ ನೀಡಿಲ್ಲ ಎಂಬ ಕಾರಣಕ್ಕೆ ಕೆರಳಿದ ಚೆಸ್ಕಂ. ಲೈನ್ ಮ್ಯಾನ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ನಿಂದಿಸಿದ ಘಟನೆ ಗೋಣಿಕೊಪ್ಪಲು ಚೆಸ್ಕಾಂ ಕಚೇರಿಯಲ್ಲಿ ನಡೆದಿದೆ.

ಗೋಣಿಕೊಪ್ಪಲು ಚೆಸ್ಕಂ ಲೈನ್ ಮ್ಯಾನ್ ಬೀರಶೆಟ್ಟಿ, ಕಿರಿಯ ಇಂಜಿನಿಯರ್ ಎಸ್.ಆರ್. ಕೃಷ್ಣಕುಮಾರ್ ಮೇಲೆ ಕರ್ತವ್ಯದಲ್ಲಿದ್ದ ಸಂದರ್ಭವೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾಗಿ ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬುಧವಾರ ಬೆಳಿಗ್ಗೆ 8:30ಕ್ಕೆ ಕರ್ತವ್ಯಕ್ಕೆ ಹಾಜರಾದ ಲೈನ್ ಮ್ಯಾನ್‍ಗಳಿಗೆ ಕರ್ತವ್ಯ ನಿರ್ವಹಿಸಲು ಸೂಚಿಸುತ್ತಿದ್ದಾಗ ಬೀರಾಶೆಟ್ಟಿಯವರಿಗೂ ಹಾತೂರು ಮಾರ್ಗದಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿತ್ತು. ಕರ್ತವ್ಯಕ್ಕೆ ಹಾಜರಾಗಲು ಕಚೇರಿಯಿಂದ ನಿರ್ಗಮಿಸುತ್ತಿದ್ದ ಸಂದರ್ಭ ನೇರವಾಗಿ ಕಿರಿಯ ಇಂಜಿನಿಯರ್ ಕೃಷ್ಣಕುಮಾರ್ ಕಚೇರಿಗೆ 9.30ಕ್ಕೆ ಹಾಜರಾದ ಬೀರಶೆಟ್ಟಿ ಭಾನುವಾರ ತಮ್ಮ ಸಂಬಂಧಿಕರ ಮದುವೆಗೆ ರಜೆ ನೀಡಬೇಕು ಎಂದು ರಜಾ ಅರ್ಜಿ ನೀಡಿದ್ದಾರೆ. ಅರ್ಜಿಯನ್ನು ಪಡೆದ ಅಧಿಕಾರಿ ಭಾನುವಾರ ಬಹುತೇಕ ಲೈನ್ ಮ್ಯಾನ್‍ಗಳು ರಜೆಯಲ್ಲಿರುವದರಿಂದ ಭಾನುವಾರ ಕರ್ತವ್ಯ ನಿರ್ವಹಿಸಿ ಎಂದು ಹೇಳಿದರು. ಈ ವೇಳೆಗೆ ಕೆರಳಿದ ಲೈನ್ ಮ್ಯಾನ್ ಬೀರಶೆಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮುಖ ಹಾಗೂ ಎದೆಗೆ ಹಲ್ಲೆ ನೆಡೆಸಿದ್ದಾರೆ ಎಂದು ಅಧಿಕಾರಿ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಕರಣ ಪೆÇಲೀಸ್ ಠಾಣೆ ಮೆಟ್ಟಿಲೇರಿದ್ದು, ಜಾತಿ ನಿಂದನೆ ಕಾಯಿದೆಯಡಿ ದೂರು ದಾಖಲಿಸಲಾಗಿದೆ. ಆರೋಪಿ ತಲೆ ಮರೆಸಿಕೊಂಡಿದ್ದು, ಪೆÇಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ತನಿಖಾಧಿಕಾರಿ ಡಿವೈಎಸ್‍ಪಿ ನಾಗಪ್ಪ ಅವರ ಸೂಚನೆ ಮೇರೆ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ದಿವಾಕರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೀರಶೆಟ್ಟಿ ವರ್ತನೆ ಬಗ್ಗೆ ಕುಂದಾ ಗ್ರಾಮಸ್ಥರು ಈತನ ಮೇಲೆ ಈ ಹಿಂದೆ ಪೆÇನ್ನಂಪೇಟೆ ಠಾಣೆಯಲ್ಲಿ ದೂರು ನೀಡಿದ್ದರು.

ವರದಿ : ಎನ್.ಎನ್. ದಿನೇಶ್