ಮಡಿಕೇರಿ, ಫೆ. 7: ಕೊಡಗು ಪ್ರೆಸ್ಕ್ಲಬ್ ಡೇ ಪ್ರಯುಕ್ತ ನಡೆದ ಪತ್ರಕರ್ತರ ಜಿಲ್ಲಾಮಟ್ಟದ ಒಳಾಂಗಣ ಕ್ರೀಡಾಕೂಟದಲ್ಲಿ ಡಿ.ಪಿ. ಲೋಕೇಶ್ (ಚೆಸ್), ಆರ್. ಸುಬ್ರಮಣಿ (ಕೇರಂ), ಕೊಳಂಬೆ ಉದಯ್ ಮೊಣ್ಣಪ್ಪ (ಟೇಬಲ್ ಟೆನ್ನಿಸ್), ಬೊಳ್ಳಜೀರ ಬಿ. ಅಯ್ಯಪ್ಪ (ಮೈಂಡ್ ಗೇಮ್) ಚಾಂಪಿಯನ್ ಆಗಿದ್ದಾರೆ ಎಂದು ಕ್ರೀಡಾಕೂಟ ಸಂಚಾಲಕ ಎಂ.ಎ. ಅಜೀಜ್ ತಿಳಿಸಿದ್ದಾರೆ.
ಟೇಬಲ್ ಟೆನ್ನಿಸ್ ಸಿಂಗಲ್ಸ್ನಲ್ಲಿ ಕೊಳಂಬೆ ಉದಯ್ ಮೊಣ್ಣಪ್ಪ (ಪ್ರ), ಅಜ್ಜಮಾಡ ರಮೇಶ್ ಕುಟ್ಟಪ್ಪ (ದ್ವಿ), ಡಬಲ್ಸ್ ವಿಭಾಗದಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ-ಕುಪ್ಪಂಡ ದತ್ತಾತ್ರಿ (ಪ್ರ), ಅಲ್ಲಾರಂಡ ವಿಠಲ ನಂಜಪ್ಪ- ಲೋಹಿತ್ ಗೌಡ (ದ್ವಿ), ಕೇರಂ ಸಿಂಗಲ್ಸ್ನಲ್ಲಿ ಆರ್. ಸುಬ್ರಮಣಿ (ಪ್ರ), ಮುಸ್ತಾಫ (ದ್ವಿ), ಡಬಲ್ಸ್ ವಿಭಾಗದಲ್ಲಿ ಆನಂದ ಕೊಡಗು- ಗಣೇಶ್ ಪ್ರಸಾದ್ (ಪ್ರ), ನಂದಗುಜ್ಜರ್- ಚನ್ನನಾಯಕ್ (ದ್ವಿ), ಚೆಸ್ ಸ್ಪರ್ಧೆಯಲ್ಲಿ ಡಿ.ಪಿ. ಲೋಕೇಶ್ (ಪ್ರ), ರೆಜಿತ್ ಕುಮಾರ್ ಗುಹ್ಯ (ದ್ವಿ), ಮೈಂಡ್ ಗೇಮ್ ಸ್ಪರ್ಧೆಯಲ್ಲಿ ಬೊಳ್ಳಜೀರ ಬಿ. ಅಯ್ಯಪ್ಪ (ಪ್ರ), ಸುವರ್ಣ ಮಂಜು (ದ್ವಿ) ಸ್ಥಾನ ಪಡೆದಿದ್ದಾರೆ. ತಾ. 10 ರಂದು ಸಂಜೆ 6.30 ಕ್ಕೆ ಪತ್ರಿಕಾ ಭವನದಲ್ಲಿ ನಡೆಯುವ ಪ್ರೆಸ್ ಕ್ಲಬ್ ಡೇ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸ್ಪರ್ಧೆ
ಕೊಡಗು ಪ್ರೆಸ್ ಕ್ಲಬ್ ಡೇ ಪ್ರಯುಕ್ತ ಶನಿವಾರ ಕ್ಲಬ್ ಸದಸ್ಯರು ಹಾಗೂ ಸದಸ್ಯರ ಕುಟುಂಬದವರಿಗೆ ವಿವಿಧ ಸಾಂಸ್ಕøತಿಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಾಂಸ್ಕøತಿ ಸಮಿತಿ ಸಂಚಾಲಕ ರೆಜಿತ್ ಕುಮಾರ್ ಗುಹ್ಯ ತಿಳಿಸಿದ್ದಾರೆ.
ಅಂದು ಮಧ್ಯಾಹ್ನ 3 ಗಂಟೆಯಿಂದ ಪತ್ರಿಕಾ ಭವನದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರೆಸ್ ಕ್ಲಬ್ ಸದಸ್ಯರಿಗೆ ಹಾಡುಗಾರಿಕೆ, ಛದ್ಮವೇಷ, ಸದಸ್ಯರ ಮಕ್ಕಳು ಮತ್ತು ಕುಟುಂಬ ಸದಸ್ಯರಿಗೆ ಹಾಡುಗಾರಿಕೆ, ನೃತ್ಯ, ಛದ್ಮವೇಷ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ತಾ. 8 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಶನಿವಾರ ಸ್ಥಳದಲ್ಲಿಯೇ ರಸಪ್ರಶ್ನೆ ಹಾಗೂ ರಸಮಯ ಕ್ರೀಡಾ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9731783149 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.