ಮಡಿಕೇರಿ, ಫೆ. 7: ಗೋಣಿಕೊಪ್ಪದ ಕಾವೇರಿ ಪಾಲಿಟೆಕ್ನಿಕ್ ತಾಂತ್ರಿಕ ಪರೀಕ್ಷಾ ಮಂಡಳಿಯ 167ನೇ ಕೇಂದ್ರೀಯ ಸಭೆಯ ನಿರ್ಣಯದಂತೆ 2009 ರ ಸೆಮಿಸ್ಟರ್ ಪಠ್ಯಕ್ರಮದ ಆರನೇ ಸೆಮಿಸ್ಟರ್‍ನಲ್ಲಿ ಬಾಕಿಯಿರುವ ವಿಷಯಗಳನ್ನು ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ 2018 ಏಪ್ರಿಲ್ - ಮೇ ಸೆಮಿಸ್ಟರ್ ಪರೀಕ್ಷೆ ಕೊನೆಯ ಅವಕಾ&divlusmn; Àವಾಗಿರುತ್ತದೆ. ಅಂತಹ ವಿದ್ಯಾರ್ಥಿಗಳು ತಾ. 24 ರೊಳಗೆ ದಂಡ ರಹಿತವಾಗಿ ಪರೀಕ್ಷಾ ಶುಲ್ಕ ಪಾವತಿಸಲು ತಿಳಿಸಲಾಗಿದೆ. ನಂತರದ ದಿನಗಳಲ್ಲಿ ವಿವಿಧ ಹಂತಗಳಲ್ಲಿ ಚಾಲ್ತಿಯಲ್ಲಿರುವ ಪರೀಕ್ಷಾ ಶುಲ್ಕಗಳ ಅಧಿಸೂಚನೆ ಅನುಸಾರ ದಂಡ ಶುಲ್ಕ ಸಹಿತವಾಗಿ ಪರೀಕ್ಷಾ ಶುಲ್ಕ ಪಾವತಿಸಲು ಸಂಬಂಧಿಸಿದ ಸಂಸ್ಥೆಗಳ ಪ್ರಾಂಶು ಪಾಲರುಗಳಿಗೆ ತಿಳಿಸಲಾಗಿದೆ.