ಗೋಣಿಕೊಪ್ಪಲು, ಫೆ.7: ಕಾಡಾನೆ ಹಾವಳಿಯ ನಿಯಂತ್ರಣದ ಬಗ್ಗೆ ಚರ್ಚಿಸಲು ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಹೋರಾಟ ನಡೆಸುವ ಉದ್ದೇಶದಿಂದ ತಾ. 9ರಂದು ಮಡಿಕೇರಿಯ ಬಾಲಭವನದಲ್ಲಿ ಜಿಲ್ಲಾ ಮಟ್ಟದ ರೈತರ , ಬೆಳೆಗಾರರ ಕಾರ್ಮಿಕ ಮುಖಂಡರ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಮಂಡೇಪಂಡ ಪ್ರವೀಣ್ ಬೋಪಯ್ಯ ತಿಳಿಸಿದರು.
ಗಡಿಭಾಗ ಕುಟ್ಟದ ಡಿಸಿಸಿ ಗೋಣಿಕೊಪ್ಪಲು, ಫೆ.7: ಕಾಡಾನೆ ಹಾವಳಿಯ ನಿಯಂತ್ರಣದ ಬಗ್ಗೆ ಚರ್ಚಿಸಲು ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಹೋರಾಟ ನಡೆಸುವ ಉದ್ದೇಶದಿಂದ ತಾ. 9ರಂದು ಮಡಿಕೇರಿಯ ಬಾಲಭವನದಲ್ಲಿ ಜಿಲ್ಲಾ ಮಟ್ಟದ ರೈತರ , ಬೆಳೆಗಾರರ ಕಾರ್ಮಿಕ ಮುಖಂಡರ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಮಂಡೇಪಂಡ ಪ್ರವೀಣ್ ಬೋಪಯ್ಯ ತಿಳಿಸಿದರು.
ಗಡಿಭಾಗ ಕುಟ್ಟದ ಡಿಸಿಸಿ ಅನಿವಾರ್ಯ ಎಂದರು.
ಹೋರಾಟ ಸಮಿತಿಯ ಕಾನೂನು ಸಲಹೆಗಾರ ಕೆ.ಬಿ.ಹೇಮಚಂದ್ರ ಮಾತನಾಡಿ ವಾಹನ ಚಾಲಕರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಕಾಡಾನೆ ಹಾವಳಿಯಿಂದ ತೀವ್ರ ತೊಂದರೆ ಉಂಟಾಗಿದ್ದು ಕಾಡಾನೆ ಹಾವಳಿಯನ್ನು ತಡೆಯುವಲ್ಲಿ ಅರಣ್ಯ ಇಲಾಖೆಯೂ ಸಂಪೂರ್ಣವಾಗಿ ವಿಫಲವಾಗಿದೆ. ಕಾಡಾನೆ ಧಾಳಿಯಿಂದ ಇತ್ತೀಚೆಗೆ 33ಕ್ಕೂ ಹೆಚ್ಚು ಕಾರ್ಮಿಕರು, ರೈತರು, ಬೆಳೆಗಾರರು ಸಾವನಪ್ಪಿದ್ದಾರೆ. ಕಾಡಾನೆÀ ಧಾಳಿಗೆ ತುತ್ತಾಗಿ ಅನೇಕರು ಅಂಗವಿಕಲರಾಗಿದ್ದಾರೆ. ಇಷ್ಟೆಲ್ಲ ಸಂಭವಿಸಿದ್ದರೂ ಅರಣ್ಯ ಇಲಾಖೆ ಸರ್ಕಾರ ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಶಾಶ್ವತವಾದ ಯಾವದೇ ಯೋಜನೆ ಕೈಗೊಳ್ಳದಿರುವ ದರಿಂದ ಇಂದು ನಾಡಿನ ಜನತೆ ಹೋರಾಟಕ್ಕೆ ಇಳಿಯುವ ಪರಿಸ್ಥಿತಿ ಬಂದೊದಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಕಳ್ಳಿಚಂಡ ಧನು ಮಾತನಾಡಿ ಹೋರಾಟದ ಮೂಲಕ ಪ್ರತಿಭಟಿಸದಿದ್ದಲ್ಲಿ ಮುಂದೆ ಬೆಳೆಗಾರರ, ರೈತರ, ಕಾರ್ಮಿಕರ ಸಮಸ್ಯೆ ಉಲ್ಬಣವಾಗಲಿದೆ ಎಂದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಚಿಮ್ಮಂಗಡ ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿರುವ ಭ್ರ್ರಷ್ಟ ಅಧಿಕಾರಿಗಳಿಂದ ರೈತರು ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೋರಾಟ ಒಂದೇ ಮಾರ್ಗ ಎಂದರು.ಹೋರಾಟ ಸಮಿತಿಯ ಕಂಬಿರಂಡ ನಂದ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ಮುಖಂಡರಾದ ಬಾಚಮಾಡ ಭವಿ ಕುಮಾರ್ ಸ್ವಾಗತಿಸಿದರು. ರೈತ ಸಂಘದ ಮಚ್ಚಮಾಡ ರಂಜಿ ವಂದಿಸಿದರು. ಹೋರಾಟ ಸಮಿತಿಯ ಮಂಡೇಪಂಡ ಅರ್ಜುನ್ ತಿಮ್ಮಯ್ಯ ಪಿ.ಎಸ್. ಗಣಪತಿ, ನಡಿಕೇರಿಯಂಡ ಮೋಹನ್ ಮಾಚಯ್ಯ, ರೈತ ಮುಖಂಡರಾದ ಬೊಟ್ಟಂಗಡ ಕಾರ್ಯಪ್ಪ, ಬಾಚಂಗಡ ನಂಜಪ್ಪ, ಮುಂತಾದವರು ಹಾಜರಿದ್ದರು.