ಗೋಣಿಕೊಪ್ಪಲು, ಫೆ. 7: ಇಲ್ಲಿನ ಕಾವೇರಿ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ಎನ್‍ಸಿಸಿ ಅಧಿಕಾರಿ ಡಾ. ಲೆಫ್ಟಿನೆಂಟ್ ಬೀನಾ ಅವರಿಗೆ ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ಸಮಾ ರಂಭದಲ್ಲಿ ಕರ್ನಾಟಕ ಮತ್ತು ಗೋವಾ ಡೈರಕ್ಟರೇಟ್‍ನ ಡಿ.ಡಿ.ಜಿ. ಕಮಂಡೇಶನ್ ಕಾರ್ಡ್ ನೀಡಿ ಗೌರವಿಸಲಾಗಿದೆ. ಇವರಿಗೆ ಮುಖ್ಯಮಂತ್ರಿಗಳ ಕಮಂಡೇಶನ್ ಕಾರ್ಡ್ ಕೂಡ ದೊರಕಿದೆ. ಇವರು ಕಳೆದ 8 ವರ್ಷಗಳಿಂದ ಎನ್‍ಸಿಸಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಜೂನ್ ತಿಂಗಳಿನಲ್ಲಿ ಕ್ಯಾಪ್ಟನ್ ಆಗಿ ಬಡ್ತಿ ಪಡೆಯಲಿದ್ದಾರೆ.