ಸೋಮವಾರಪೇಟೆ, ಫೆ. 7: ಪ್ರಪಂಚದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಸಂವಿಧಾನದ ಮೂಲಕ ಮಹಿಳೆಯರ ಹಕ್ಕು ಬಾಧ್ಯತೆಗಳ ರಕ್ಷಣೆಗೆ ಹಲವಷ್ಟು ಕಾನೂನುಗಳಿದ್ದು, ಇವುಗಳ ಬಗ್ಗೆ ಕನಿಷ್ಟ ಅರಿವನ್ನು ಮಹಿಳೆಯರು ಹೊಂದಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ರೇವತಿ ಅವರು ಕರೆ ನೀಡಿದರು.

ಸಮೀಪದ ಕಲ್ಕಂದೂರು ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಶಾಂತಳ್ಳಿ ವಲಯ, ಕಲ್ಕಂದೂರು ಕಾರ್ಯಕ್ಷೇತ್ರ ಒಕ್ಕೂಟ ಸಭೆ ಮತ್ತು ಜ್ಞಾನವಿಕಾಸ ಕೇಂದ್ರದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯಾಚಾರ, ಭ್ರೂಣ ಹತ್ಯೆ, ಕಿರುಕುಳ, ದೌರ್ಜನ್ಯ, ಮಹಿಳೆಯರ ಉದ್ಯೋಗ, ವಿಚ್ಛೇದನ, ವರದಕ್ಷಿಣೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಹಿಂದೂ ಮಹಿಳೆಯರ ಆಸ್ತಿ ಹಕ್ಕು ಕಾಯ್ದೆ ಸೇರಿದಂತೆ ಮಹಿಳಾ ಸಹಾಯವಾಣಿಯ ಬಗ್ಗೆ ಪತ್ರಕರ್ತ ವಿಜಯ್ ಹಾನಗಲ್ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಕಂದೂರು ಒಕ್ಕೂಟದ ಉಪಾಧ್ಯಕ್ಷ ಶಿವ ಕುಮಾರ್, ಕಾರ್ಯದರ್ಶಿ ರಾಜೇಶ್ವರಿ, ಪವಿತ್ರ, ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವ ಯಾಧಿಕಾರಿ ಭಾವನ, ಸೇವಾ ಪ್ರತಿನಿಧಿಗಳಾದ ನಿಖಿತಾ, ಪುಷ್ಪಾ, ಸೆಲ್ಕೋ ಸೋಲಾರ್‍ನ ಶಶಿ ಕುಮಾರ್ ಅವರುಗಳು ಉಪಸ್ಥಿತರಿದ್ದರು.