ಮಡಿಕೇರಿ, ಫೆ. 6: ಇಲ್ಲಿನ ಅರಣ್ಯ ಭವನಕ್ಕೆ ಹೊಂದಿ ಕೊಂಡಿರುವ ಮಡಿಕೇರಿ ಪೂರ್ವ ವಲಯದ ಕಾಡಿನೊಳಗೆ ವಾಸಿಸುತ್ತಿರುವ ಕಡವೆಗಳ ಹಿಂಡಿನಲ್ಲಿದ್ದ ಗಂಡು ಕಡವೆಯೊಂದನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಹಾಕಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಇಂದು ಹಗಲು ವೇಳೆ ಅರಣ್ಯ ಭವನದ ಮುಖ್ಯ ದ್ವಾರ ಬಳಿ ದುರ್ನಾತದ ಸುಳಿವು ಪಡೆದು ಪರಿಶೀಲಿಸಿದ ಸಂದರ್ಭ ಕಡವೆಯ ಹತ್ಯೆ ಬಹಿರಂಗಗೊಂಡಿದೆ.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ವಲಯ ಅರಣ್ಯಾಧಿಕಾರಿ ವಿಜಯಕುಮಾರ್, ಸಹಾಯಕ ಅರಣ್ಯ ವಲಯಾಧಿಕಾರಿ ಬಾಬು ರಾಥೋಡ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ ವೇಳೆ ಗಂಡು ಕಡವೆ ಅಮಾನುಷವಾಗಿ ಗುಂಡೇಟಿನಿಂದ ಸಾವನ್ನಪ್ಪಿರುವದು ಗೋಚರಿಸಿದೆ.
ಅಧಿಕಾರಿಗಳ ಪ್ರಕಾರ ಮಡಿಕೇರಿ ಪೂರ್ವ ವಲಯ ಅರಣ್ಯದೊಳಗೆ ಸುಮಾರು 12 ಕಡವೆಗಳ ಹಿಂಡು ವಾಸವಿದ್ದು, ಇದುವರೆಗೆ ಯಾವದೇ ತೊಂದರೆ ನೀಡಿಲ್ಲವೆನ್ನಲಾಗಿದೆ. ಹೀಗಿರುವಾಗ ಅರಣ್ಯ ಭವನ ಬಳಿಯೇ ದುಷ್ಕರ್ಮಿಗಳು ಯಾವ ಉದ್ದೇಶಕ್ಕಾಗಿ ಈ ಹತ್ಯೆಗೈದಿದ್ದಾರೆ ಎನ್ನುವ ಅನುಮಾನ ಹುಟ್ಟಿಕೊಂಡಿದೆ.
ಅಲ್ಲದೆ ಕಡವೆಯ ಹೊಟ್ಟೆ ಭಾಗಕ್ಕೆ ಬಲವಾಗಿ ಗುಂಡೇಟು ಬಿದ್ದಿದ್ದು, ಮದ್ದುಗುಂಡು ಚದುರಿರುವ ಪರಿಣಾಮ ಮೂರು ಕಡೆಗಳಲ್ಲಿ ಗಾಯಗಳಾಗಿವೆ. ಇಂದು ಕಡವೆಯ ಕಳೇಬರವನ್ನು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಪಶುವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಕಡವೆಯ ದೇಹ ಹೊಕ್ಕಿರುವ ಮದ್ದುಗುಂಡು ಹೊರತೆಗೆಯಲು ಸಾಧ್ಯವಾಗಿಲ್ಲ. ಹೀಗಾಗಿ ತಾ. 7 ರಂದು (ಇಂದು) ಹುಣಸೂರುವಿನಲ್ಲಿರುವ