ಮೂರ್ನಾಡು, ಫೆ. 6: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆಗಳ ಉದ್ಘಾಟನೆ ನೆರವೇರಿತು. ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯರ ವಿಶೇಷ ಅನುದಾನದಲ್ಲಿ ರೂ. 46 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಿದರು. ಕಿಗ್ಗಾಲು ಗ್ರಾಮದ ವಿಷ್ಣಪ್ಪ ದೇವಾಲಯದ ಕಾಂಕ್ರಿಟ್ ರಸ್ತೆ, ಶಾಸ್ತ್ರಿ ನಗರದ ಕಾಂಕ್ರಿಟ್ ರಸ್ತೆ, ವೆಂಕಟೇಶ್ವರ ಕಾಲೋನಿ ಪಾತು ಮನೆಯ ಕಾಂಕ್ರಿಟ್ ರಸ್ತೆ, ಸರಸ್ವತಿ ನಗರದ ಕಾಂಕ್ರಿಟ್ ರಸ್ತೆ ಹಾಗೂ ಕೋಡಂಬೂರು ಬಡುವಂಡ ಐನ್ಮನೆ ಮತ್ತು ಅಯ್ಯಪ್ಪ ದೇವಾಲಯಕ್ಕೆ ತೆರಳುವ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಉದ್ಘಾಟಿಸ ಲಾಯಿತು. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ಮೂರ್ನಾಡು ವಲಯ ಕಾಂಗ್ರೆಸ್ ಅಧ್ಯಕ್ಷ ಮುಂಡಂಡ ಭಾಗೇಶ್, ವಲಯ ಕಾಂಗ್ರೆಸ್ ಉಪಾಧ್ಯಕ್ಷ ಧನುಂಜಯ್, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಸದಸ್ಯೆ ಮೀನಾಕ್ಷಿ ಕೇಶವ, ಈರ ಸುಬ್ಬಯ್ಯ, ರಾಣಿ, ಬೆಳ್ಳವ್ವ ತಂಗಚ್ಚಿ, ಯುವ ಕಾಂಗ್ರೆಸ್ ಅಧ್ಯಕ್ಷ ಸೈಫ್ ಆಲಿ, ಹಿಂದುಳಿದ ವರ್ಗದ ಜಿಲ್ಲಾ ಉಪಾಧ್ಯಕ್ಷ ಬಿ.ಸಿ. ಅಣ್ಣು, ಮೊದಲಾದವರು ಉಪಸ್ಥಿತರಿದ್ದರು.