ಮಡಿಕೇರಿ, ಫೆ. 6: ಸಂಪಾಜೆ ಗ್ರಾ.ಪಂ. ವ್ಯಾಪ್ತಿಯ ಕೊಯನಾಡು ಗುಡ್ಡಗದ್ದೆಯಲ್ಲಿ ತಾ. 2 ರಂದು ಮೂವರು ನಕ್ಸಲರು ಕಾಣಿಸಿಕೊಂಡಿದ್ದ ಪ್ರಕರಣ ಸಂಬಂಧ ಅಲ್ಲಿನ ಅರಣ್ಯ ವ್ಯಾಪ್ತಿಯಲ್ಲಿ ಶೋಧ (ಕೋಂಬಿಂಗ್) ಕಾರ್ಯಾಚರಣೆ ಮುಂದುವರಿಸಿದೆ. ನಕ್ಸಲ್ ನಿಗ್ರಹದಳ ಹಾಗೂ ಪೊಲೀಸ್ ಶೋಧ ನಡೆದಿದ್ದರೂ ಈ ತನಕ ಯಾವದೇ ಸುಳಿವು ಲಭಿಸಿಲ್ಲವೆಂದು ಮೂಲಗಳಿಂದ ಗೊತ್ತಾಗಿದೆ.