ಮಡಿಕೇರಿ, ಫೆ. 6: ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಸಂಘದ ವತಿಯಿಂದ ಇತ್ತೀಚೆಗೆ ‘ಧ್ವನಿ ವಿಜ್ಞಾನ-ಇಂಗ್ಲೀಷ್ ಉಚ್ಚಾರಣೆ’ ಎಂಬ ವಿಷಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಕಾಲೇಜಿನ ಎಲ್ಲಾ ಬಿ.ಕಾಂ. ಮತ್ತು ಬಿ.ಬಿ.ಎ ವಿದ್ಯಾರ್ಥಿಗಳಿಗೆ ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಇಂಗ್ಲೀಷ್ ತರಬೇತುದಾರ ಸೆಬಿ ಮಾವೇಲಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಬಳಕೆಯನ್ನು ಆಕರ್ಷಕವಾಗಿ ಮತ್ತು ಸುಲಲಿತವಾಗಿ ಉಚ್ಚರಿಸುವ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ, ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರದ ಮುಖ್ಯಸ್ಥ ಹೆಚ್.ಎಸ್. ವೇಣುಗೋಪಾಲ್ ಮತ್ತು ಇತರರು ಉಪಸ್ಥಿತರಿದ್ದರು.