ಮಡಿಕೇರಿ, ಫೆ. 6: ಕಾವೇರಿ ಕಾಲೇಜು, ಗೋಣಿಕೊಪ್ಪಲು ಸುವರ್ಣ ಮಹೋತ್ಸವದ ವರ್ಷಾಚರಣೆ ಅಂಗವಾಗಿ ಜಿಲ್ಲಾಮಟ್ಟದ

ಕ್ರಿಕೆಟ್ ಮತ್ತು ಥ್ರೋಬಾಲ್ ಪಂದ್ಯಾವಳಿಯನ್ನು ಕಾಲೇಜಿನ ಬೋಧಕ ಹಾಗೂ ಬೋಧಕರ ಸಿಬ್ಬಂದಿಗಳಿಗೆ ತಾ. 10 ಮತ್ತು 11ರಂದು ಕಾವೇರಿ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಪಂದ್ಯಾವಳಿಗೆ ಪಾರಿತೋಷಕಗಳನ್ನು ಪುಳ್ಳಂಗಡ ನಂಜಮ್ಮ ಮತ್ತು ಮಕ್ಕಳು ಪುಳ್ಳಂಗಡ ಎಂ. ಚಿಣ್ಣಪ್ಪ ಜ್ಞಾಪಕಾರ್ಥ ವಾಗಿಯೂ ಹಾಗೂ ಕುಪ್ಪಣಮಾಡ ಭಾರತಿಮಾದಪ್ಪ ಇವರು ತಮ್ಮ ತಂದೆ ಮೂಕಳೇರ ಎಂ. ಸೋಮಣ್ಣ ಜ್ಞಾಪಕಾರ್ಥವಾಗಿ ಪ್ರಾಯೋಜಿಸುತ್ತಿದ್ದಾರೆ.

ಕಾವೇರಿ ಕಾಲೇಜಿನ ಬೋಧಕರು ಪ್ರಾಯೋಜಿಸಿರುವ ಈ ಪಂದ್ಯಾವಳಿಯಲ್ಲಿ ಜಿಲ್ಲೆಯ ಸುಮಾರು 20 ಕ್ರಿಕೆಟ್ ತಂಡಗಳು ಮತ್ತು 10 ಥ್ರೋಬಾಲ್ ತಂಡಗಳು ಭಾಗವಹಿಸಲಿವೆ ಎಂದು ಪ್ರಕಟಣೆಯಲ್ಲಿ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ತಿಳಿಸಿದ್ದಾರೆ.