ಮಡಿಕೇರಿ, ಫೆ. 4: ಬೆಂಗಳೂರಿನಿಂದ ದುಬಾರೆಗೆ ಪ್ರವಾಸ ಬಂದಿದ್ದ ಮಹಿಳೆ ಶೃತಿ (27) ಎಂಬವರಿಗೆ ರಸ್ತೆ ದಾಟುವಾಗ ಅಪರಿಚಿತನೊಬ್ಬ ಬೈಕ್ ಡಿಕ್ಕಿಪಡಿಸಿ ಪರಾರಿಯಾಗಿರುವ ಘಟನೆ ಇಂದು 3 ಗಂಟೆ ಸುಮಾರಿಗೆ ಸಂಭವಿಸಿದೆ.

ಗಾಯಾಳು ಮಹಿಳೆಯ ತಲೆ ಹಾಗೂ ಕಾಲಿಗೆ ಪೆಟ್ಟಾಗಿದ್ದು, ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆ ನಂತರ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕುಶಾಲನಗರ ಗ್ರಾಮಾಂತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.