ಭಾಗಮಂಡಲ, ಫೆ. 4: ಭಾಗಮಂಡಲ ಹೋಬಳಿ ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕರ್ತರ ಮತ್ತು ಹಿತೈಷಿಗಳ ಸಭೆ ತಾ. 5 ರಂದು (ಇಂದು) ಪೂರ್ವಾಹ್ನ 10.30ಕ್ಕೆ ಭಾಗಮಂಡಲ ಗೌಡ ಸಮಾಜದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಸಭೆಗೆ ಮಾಜಿ ಸಚಿವ ಬಿ.ಎ. ಜೀವಿಜಯ, ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹಾಗೂ ರಾಜ್ಯ ಪದಾಧಿಕಾರಿ ಗಳು ಮತ್ತು ಜಿಲ್ಲೆಯ ವಿವಿಧ ಘಟಕಗಳ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಣತ್ತಲೆ ಪಿ. ವಿಶ್ವನಾಥ್ ಮತ್ತು ಭಾಗಮಂಡಲ ಸ್ಥಾನೀಯ ಸಮಿತಿ ಅಧ್ಯಕ್ಷ ಜೆ.ಎಸ್. ನಂಜುಂಡಪ್ಪ ತಿಳಿಸಿದ್ದಾರೆ.