ಮಡಿಕೇರಿ ಫೆ.2 : ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿರುವ ಶ್ರೀ ಅಗಸ್ತ್ಯೇಶ್ವರ ದೇವಾಲಯದಲ್ಲಿ ಫೆ.4 ರಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ರುದ್ರಾಭಿಷೇಕ ಸಮರ್ಪಣೆ ಮಾಡಲಾಗುವದೆಂದು ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 6.30 ಗಂಟೆಗೆ ಕೊಡವರ ಕುಲಗುರು ಅಗಸ್ತ್ಯರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ರುದ್ರಾಭಿಷೇಕ ನಡೆಸುತ್ತಿರುವದಾಗಿ ತಿಳಿಸಿದರು. ವೇದ ಉಪನಿಷತ್ತು, ರಾಮಾಯಣ, ಮಹಾಭಾರತ, ಸ್ಕಂದ ಪುರಾಣ, ತಮಿಳು ಮಹಾಕಾವ್ಯ ತಿರುಕುರುಳ್, ಕೊಡಗಿನ ಪಟ್ಟೋಲೆ ಪಳಮೆ ಕೃತಿಗಳಲ್ಲಿ ಮಹರ್ಷಿ ಅಗಸ್ತ್ಯರ ಹಿರಿಮೆ ಗರಿಮೆ, ತಪಃಶಕ್ತಿ ಮತ್ತು ಮಹಿಮೆಗಳನ್ನು ದಾಖಲಿಸಲಾಗಿದೆ. ಅಗಸ್ತ್ಯರು ಕೊಡವ ನಾಗರೀಕತೆಯ ಮೂಲ ತಳಪಾಯವಾಗಿದ್ದರಲ್ಲದೆ, ಅಗಸ್ತ್ಯ ಮತ್ತು ಕಾವೇರಿ ಹೆಸರಿನ ಜೋಡಣೆ ಇಲ್ಲದೆ ಕೊಡವ ಬುಡಕಟ್ಟು ಕುಲ ಅಪೂರ್ಣವೆನಿಸುತ್ತದೆ ಎಂದರು.

ಅಷ್ಟಮಂಗಲ ಪ್ರಶ್ನೆಯಲ್ಲಿ ಕೊಡವರು ತಮ್ಮ ಕುಲಗುರು ಅಗಸ್ತ್ಯರನ್ನು ದಿವ್ಯ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಕಂಡು ಬಂದಿದ್ದು, ಸಿಎನ್‍ಸಿ ಸಂಘÀಟನೆ ಇಡೀ ಕೊಡವ ಸಮುದಾಯವನ್ನು ಪ್ರತಿನಿಧಿಸುವ ಮೂಲಕ ರುದ್ರಾಭಿಷೇಕ ನಡೆಸಿ ಅಗಸ್ತ್ಯರಿಗೆ ಗೌರವ ಸಲ್ಲಿಸುತ್ತಿರುವದಾಗಿ ತಿಳಿಸಿದರು.

ಮಹರ್ಷಿ ಅಗಸ್ತ್ಯರು ತಮ್ಮ ಅಸಾಮಾನ್ಯ ಶಕ್ತಿ ಸಾಮಥ್ರ್ಯ, ಯುದ್ಧ ಕೌಶಲ್ಯ, ಕ್ಷಾತ್ರ ತೇಜಸ್ಸು ಹಾಗೂ ದೃಢ ಸಂಕಲ್ಪವನ್ನು ಕೊಡವರಿಗೆ ಧಾರೆಯೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದಕ್ಕೂ ಅಗಸ್ತ್ಯರಿಗೆ ಕೃತಾರ್ಥರಾಗಿ ಅವರ ಸೇನಾ ಕೌಶಲ್ಯ ಮತ್ತು ದೃಢತೆಯನ್ನು ಮತ್ತಷ್ಟು ಮೈಗೂಡಿಸಿಕೊಂಡು, ಆ ಸಂಕಲ್ಪ ಶಕ್ತಿಯ ಮೂಲಕ ಅಗಸ್ತ್ಯರ ತಪದ ಮಣೆಯಾಗಿರುವ ಕೊಡವ ನೆಲವನ್ನು ಕೊಡವ ಲ್ಯಾಂಡ್ ಆಗಿ ಮತ್ತೆ ಸಾಂವಿಧಾನಿಕವಾಗಿ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಲು ಅಗಸ್ತ್ಯರಿಗೆ ಗೌರವವನ್ನು ಸಲ್ಲಿಕೆ ಮಾಡುತ್ತಿರುವದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪÀÅಲ್ಲೇರ ಕಾಳಪ್ಪ ಹಾಗೂ ಚಂಬಂಡ ಜನತ್ ಕುಮಾರ್ ಉಪಸ್ಥಿತರಿದ್ದರು.