ಮಡಿಕೇರಿ, ಫೆ. 2: ಮಲೇಶಿಯನ್ ಯೋಗ ಅಸೋಸಿಯೇಶನ್ ಹಾಗೂ ಭಾರತ ಎಸ್‍ಜಿಎಸ್ ಅಂತರ್ರಾಷ್ಟ್ರೀಯ ಯೋಗ ಅಸೋಸಿಯೇಶನ್ ಸಂಯುಕ್ತಾಶ್ರಯದಲ್ಲಿ ಮಲೇಶಿ ಯಾದಲ್ಲಿ ಅಂತರ್ರಾಷ್ಟ್ರೀಯ ಯೋಗ ಉತ್ಸವ ಏರ್ಪಡಿಸಲಾಗಿತ್ತು. ಉತ್ಸವದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಯೋಗ ಗುರು ವಿಯೇಟ್ನಾಂನಲ್ಲಿ ಯೋಗ ಕೇಂದ್ರ ನಡೆಸುತ್ತಿರುವ ಡಾ. ಚೆರಿಯಮನೆ ಸಂತೋಷ್ ಅವರಿಗೆ ಉತ್ತಮ ಯೋಗ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಉತ್ಸವದಲ್ಲಿ ಪಾಕಿಸ್ತಾನ ಸೇರಿದಂತೆ ವಿವಿಧ ರಾಷ್ಟ್ರಗಳ ಯೋಗ ಶಿಕ್ಷಕರು ಪಾಲ್ಗೊಂಡಿದ್ದರು.