ಆಲೂರುಸಿದ್ದಾಪುರ, ಫೆ. 2: ಕರ್ನಾಟಕ ಜಾನಪದ ಪರಿಷತ್ತಿನ ಶನಿವಾರಸಂತೆ ಹೋಬಳಿ ಘಟಕ ಮತ್ತು ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ತಾ. 3ರಂದು (ಇಂದು) ಜಾನಪದ ಜಾತ್ರೆ ನಡೆಯಲಿದೆ. ಶಾಲಾ ಆವರಣದಲ್ಲಿ ಜಾತ್ರೆ ನಡೆಯಲಿದ್ದು. ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಜಾತ್ರೆಯನ್ನು ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಜಿ. ಅನಂತಶಯನ ಉದ್ಘಾಟಿಸುತ್ತಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಮಣಿ ವಹಿಸಲಿದ್ದು, ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷೆ ಸುಜಲಾದೇವಿ, ಗೌರವಾಧ್ಯಕ್ಷೆ ಸರೋಜಮ್ಮ, ದಾನಿಗಳಾದ ವೇದಕುಮಾರ್, ವಸಂತ್‍ಕುಮಾರ್, ಲಕ್ಷ್ಮಿರವಿಕುಮಾರ್ ಮುಂತಾದವರು ಭಾಗವಹಿಸುತ್ತಾರೆ, ಬೆಳಿಗ್ಗೆ 10 ಗಂಟೆಯಿಂದ ಜಾನಪದ ಜಾತ್ರೆ ಪ್ರಯುಕ್ತ ಮುಳ್ಳೂರು ಜಂಕ್ಸನ್‍ನಿಂದ ಶಾಲೆಯವರೆಗೆ ಜಾನಪದ ಹಿನ್ನೆಲೆ ಸಾರುವ ವಿವಿಧ ಜಾನಪದ ಸ್ಥಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.