ಗುಡ್ಡೆಹೊಸೂರು, ಫೆ. 3: ಇಲ್ಲಿಗೆ ಸಮೀಪದ ಬಸವನಹಳ್ಳಿ ಬಳಿ ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ (ಕೆ.ಎ. 19-5561) ವಾಹನ ಪಲ್ಟಿಯಾಗಿದೆ ರಸ್ತೆಯಲ್ಲಿ ದನಗಳು ಅಡ್ಡ ಬಂದ
ಸಂದರ್ಭ ಚಾಲಕ ಸಮೀರ್ ಎಂಬುವವರು ದನಕ್ಕೆ ಡಿಕ್ಕಿ ಪಡಿಸುವದನ್ನು ತಪ್ಪಿಸಲು ಹೋಗಿ ಈ ಅವಘಡ ಸಂಭವಿಸಿದೆ ಆನೆಕಾಡು ಬಸವನಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸವಾರರು ದÀನಗಳಿಂದ ಭಾರೀ ಅನಾಹುತ ಎದುರಿಸುವಂತಾಗಿದೆ. ಸಂಬಂಧಪಟ್ಟವರು ಇದನ್ನು ತಡೆಗಟ್ಟಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.