ಶ್ರೀಮಂಗಲ, ಫೆ. 3: ಯುನೈಟೆಡ್ ಕೊಡವ ಅರ್ಗನೈಷೇಸನ್ ಆಶ್ರಯದಲ್ಲಿ, ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ನಡೆದ ನಾಲ್ಕನೇ ವರ್ಷದ ಯುಕೊ ಕೊಡವ ಮಂದ್ ನಮ್ಮೆಯ “ಮೊದ ಜೊಪ್ಪೆ”ಯ ಅದೃಷ್ಟಶಾಲಿ ವಿಜೇತರಿಗೆ ಗೋಣಿಕೊಪ್ಪಲಿನ ದಿ ಕೂಕುನ್ ಸ್ಫೈಸ್ ರ್ಯಾಕ್ ಹೊಟೇಲ್ ಸಭಾಂಗಣದಲ್ಲಿ ಬಹುಮಾನ ವಿತರಿಸಲಾಯಿತು.

ಗೋಣಿಕೊಪ್ಪ ಕೊಡವ ಸಮಾಜದ ಅಧ್ಯಕ್ಷರಾದ ಚೆಕ್ಕೇರ ಸೋಮಯ್ಯ ಹಾಗೂ ಗೋಣಿಕೊಪ್ಪ ಮಹಿಳಾ ಸಮಾಜದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ವಿಜೇತರಿಗೆ ಕೊಡವ ಸಂಪ್ರದಾಯಿಕ ಆಭರಣ ಸೇರಿದಂತೆ ಒಟ್ಟು ರೂ.2.25 ಲಕ್ಷ ಮೌಲ್ಯದ ಬಹುಮಾನನ್ನು ವಿತರಿಸಿದರು.

ಪ್ರಥಮ ಬಹುಮಾನ ‘ಜೋಮಾಲೆ’ ಯನ್ನು ನಾಪೋಕ್ಲು ಸಮೀಪ ಯವಕಪಾಡಿಯ ಕೆಟೋಳಿರ ಶ್ಯಾಂ ಉತ್ತಪ್ಪ, ದ್ವಿತೀಯ ಬಹುಮಾನ ‘ಕೊಕ್ಕೆತಾತಿ’ ಯನ್ನು ಪೊನ್ನಂಪೇಟೆಯ ಬಾಚೀರ ಪ್ರಶಾಂತ್ ಅಯ್ಯಪ್ಪ, ತೃತೀಯ ಬಹುಮಾನ ‘ಪೀಜೆಕತ್ತಿ’ ಯನ್ನು ಮರಗೊಡುವಿನ ತಾತಪಂಡ ಲವ, ನಾಲ್ಕನೇ ಬಹುಮಾನ 4 ಗ್ರಾಂ ಚಿನ್ನದ ನಾಣ್ಯವನ್ನು ಬೆಂಗಳೂರಿನ ಅರೆಯಡ ಪವಿನ್ ಪೊನ್ನಣ್ಣ ಹಾಗೂ 5ನೇ ಬಹುಮಾನ 2 ಗ್ರಾಂ ಚಿನ್ನದ ನಾಣ್ಯವನ್ನು ಗೋಣಿಕೊಪ್ಪದ ನಾಸಿರ್ ಅವರಿಗೆ ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಕೊಡವ ಮಂದ್ ನಮ್ಮೆಯಲ್ಲಿ ಕೊಡವ ಸಂಸ್ಕøತಿಯ ಎಲ್ಲಾ ಆಯಾಮಗಳನ್ನು ಸಹ ಕೊಡವ ಸಮಾಜದ ಮನೆ ಮನಗಳಲ್ಲಿ ತಲುಪಿಸುವ ನಿಟ್ಟಿನಲ್ಲಿ ‘ಮೊದ ಜೊಪ್ಪೆ’ ಕಾರ್ಯಕ್ರಮವು ಒಂದು ಭಾವನಾತ್ಮಕ ಬೆಸುಗೆಯಾಗಿದೆ ಎಂದು ಹೇಳಿದರು.

ಗೋಣಿಕೊಪ್ಪ ಕೊಡವ ಸಮಾಜದ ಅಧ್ಯಕ್ಷ ಚೆಕ್ಕೇರ ಸೋಮಯ್ಯ ಅವರು ಮಾತನಾಡಿ ಮಂದ್ ನಮ್ಮೆಯ ಮೂಲಕ ಯುಕೊ ಸಂಘಟನೆ ಕೊಡವರ ಭಾವನೆಯನ್ನು ಬೆಸೆಯುವ ಕೆಲಸ ಮಾಡುತ್ತಿದೆ ಎಂದರು.

ಪ್ರಾಧ್ಯಾಪಕಿ ಬಾಚೀರ ವಿದ್ಯಾ ಪ್ರಶಾಂತ್ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಕೊಡವ ಸಮಾಜದÀ ಜಂಟಿ ಕಾರ್ಯದರ್ಶಿ ಸಣ್ಣುವಂಡ ವಿಶ್ವನಾಥ್, ಜಿ.ಪಂ ಮಾಜಿ ಸದಸ್ಯೆ ಚೋಡುಮಾಡ ಶರೀನ್ ಸುಬ್ಬಯ್ಯ, ಕರ್ನಲ್ ಚೆಪ್ಪುಡಿರ ಮುತ್ತಣ್ಣ, ಚೇಂದಂಡ ಸುಮಿ ಸುಬ್ಬಯ್ಯ, ನೂರೇರ ರತಿ ಅಚ್ಚಪ್ಪ, ಮೂಕಳೇರ ಕಾವ್ಯ, ನಂದೇಟಿರ ರವಿ ಸುಬ್ಬಯ್ಯ, ಮಚ್ಚಮಾಡ ಸನೀಶ್ ಮಾದಪ್ಪ, ಪಳಂಗಿಯಂಡ ದರ್ಶನ್ ಮುತ್ತಪ್ಪ, ಮುಂಡಂಡ ಅರುಣ್, ಚೋವಂಡ ಪೊನ್ನಣ್ಣ, ಚೆಪ್ಪುಡಿರ ಸುಜು ಕರುಂಬಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಉಳುವಂಗಡ ಲೋಹಿತ್ ಭೀಮಯ್ಯ, ಮಲ್ಲಮಾಡ ದೇವಯ್ಯ, ನೆಲ್ಲಮಕ್ಕಡ ಪ್ರತಿಷ್ಠ ಮಾದಯ್ಯ, ಗುಡಿಯಂಗಡ ಲಿಖಿನ್ ಬೋಪಣ್ಣ, ಪುಟ್ಟಂಗಡ ಉತ್ತಪ್ಪ ಹಾಗೂ ಮತ್ತಿತರರು ಹಾಜರಿದ್ದರು.