ಮಡಿಕೇರಿ, ಫೆ. 2: ದೂರವಾಣಿ ಮೂಲಕ ಎಟಿಎಂ ಪಿನ್‍ಕೋಡ್ ಪಡೆದು ರೂ. 3,45,900 ಡ್ರಾ ಮಾಡಿ ವಂಚಿಸಿರುವ ಪ್ರಕರಣದ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಡಿಕೇರಿ ನಗರದ ಸಂಪಿಗೆಕಟ್ಟೆ ನಿವಾಸಿ, ಎಂ.ಪಿ. ಯೋಗಾನಂದ ಎಂಬವರಿಗೆ ಅಪರಿಚಿತ ವ್ಯಕ್ತಿಯೊಬ್ಬ ದೂರವಾಣಿ ಮೂಲಕ ತಾನು ಎಸ್‍ಬಿಐ ಅಧಿಕಾರಿ ಎಂದು ಹೇಳಿ ಎಟಿಎಂ ಕಾರ್ಡ್‍ನ ಮಾಹಿತಿಯನ್ನು ಪಡೆದುಕೊಂಡು ಬ್ಯಾಂಕ್ ಖಾತೆಯಿಂದ ಜ. 20 ರಿಂದ 26ರ ಅವಧಿಯಲ್ಲಿ 3,45,900 ರೂ.ಗಳನ್ನು ಡ್ರಾ ಮಾಡಿ ವಂಚಿಸಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.