ಮಡಿಕೇರಿ, ಫೆ. 3: ಮಕ್ಕಂದೂರು, ಕೆ. ನಿಡುಗಣೆ ಹಾಗೂ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಇಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನೂತನ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ಕೆಲಸ ಕಳಪೆಯಾಗದಂತೆ ಅಲ್ಲಿನ ನಿವಾಸಿಗಳು ನೋಡಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಕ್ಕಂದೂರು ಗ್ರಾ.ಪಂ. ಅಧ್ಯಕ್ಷೆ ಕಾವೇರಮ್ಮ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಪಿ. ರಾಯ್ ತಮ್ಮಯ್ಯ, ಮಾಜಿ ತಾ.ಪಂ. ಸದಸ್ಯ ರವಿಕಾಳಪ್ಪ, ಸದಸ್ಯರುಗಳಾದ ರಮೇಶ್, ಸತೀಶ್, ವಿಮಲ ಮೊದಲಾದವರು ಹಾಜರಿದ್ದರು.
ಕಳಕೇರಿ ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಉದಯಗಿರಿ, ಕ್ರಿಶ್ಚಿಯನ್ ಕಾಲೋನಿ, ಬಾಬು ಕಾಲೋನಿ, ಹೆಬ್ಬೆಟ್ಟಗೇರಿಯಲ್ಲಿ ಶಾಸಕರು ರಸ್ತೆ ಕಾಮಗಾರಿಗೆ ಭೂಮಿಪೂಜೆಯೊಂದಿಗೆ, ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದರು. ಈ ಸಂದರ್ಭ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಗ್ರಾ.ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ, ಗ್ರಾ.ಪಂ. ಉಪಾಧ್ಯಕ್ಷ ಜಾಜಿ ಸತೀಶ್, ಸದಸ್ಯರುಗಳಾದ ಡೀನ್ ಬೋಪಣ್ಣ, ಮಾಜಿ ಅಧ್ಯಕ್ಷ ಪ್ರದೀಪ್, ಜಾನ್ಸನ್ ಪಿಂಟೋ ಮೊದಲಾದವರು ಪಾಲ್ಗೊಂಡಿದ್ದರು.
ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಕವೋಟು ಕಾಲೋನಿ ರಸ್ತೆ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದ ಸಂದರ್ಭ, ಜಿ.ಪಂ. ಹಾಗೂ ತಾ.ಪಂ. ಪ್ರಮುಖರ ಸಹಿತ ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಪಿ.ಜೆ. ಸುಭಾಷ್ ಸೋಮಯ್ಯ, ಸದಸ್ಯರುಗಳಾದ ಸುಭಾಷ್ ಆಳ್ವ, ಧನಂಜಯ, ಪ್ರದೀಪ್, ರಾಣಿ ಮುತ್ತಣ್ಣ ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿದ್ದರು. ಅಲ್ಲಲ್ಲಿ ಜರುಗಿದ ಕಾರ್ಯಕ್ರಮಗಳಲ್ಲಿ ಆಯಾ ವಸತಿ ನಿವಾಸಿಗಳು ಭಾಗವಹಿಸಿದ್ದರು.