ಮಡಿಕೇರಿ, ಫೆ. 3: ಖಗ್ರಾಸ ಚಂದ್ರ ಗ್ರಹಣದ ದಿನ ಮುಸ್ಸಂಜೆ ಪಾಲಿಬೆಟ್ಟ ಮಸೀದಿಯಲ್ಲಿ ವಿಶೇಷ ಗ್ರಹಣ ನಮಾಝ್ ಹಾಗೂ ಪ್ರಾರ್ಥನೆಯನ್ನು ನಡೆಸಲಾಯಿತು.

ಈ ವಿಶೇಷ ನಮಾಝ್‍ಗೆ ನೇತೃತ್ವ ಕೊಟ್ಟು ಮಾತನಾಡಿದ ಮಸೀದಿಯ ಧರ್ಮಗುರು ಅಲಿ ಸಖಾಫಿ, ಸೂರ್ಯ ಗ್ರಹಣ ಹಾಗೂ ಚಂದ್ರ ಗ್ರಹಣಗಳು ಯಾವದೇ ಶುಭ-ಅಶುಭ ಸೂಚಕವಲ್ಲ. ಅದು ಭಗವಂತನ ಇಚ್ಛೆಯಂತೆ ಸಂಭವಿಸುತ್ತದೆ ಎಂದರು.

1400 ವರ್ಷಗಳ ಮಹಮದ್ ಪೈಗಂಬರರ ಸುಪುತ್ರ ಇಬ್ರಾಹಿಂ ವಿಧಿವಶರಾದ ದಿನ ಗ್ರಹಣ ಸಂಭವಿಸಿತ್ತು. ಪ್ರವಾದಿ ಅನುಯಾಯಿಗಳು ಆ ಕಾರಣದಿಂದ ಗ್ರಹಣ ಸಂಭವಿಸಿತೆ ಎಂದು ಪ್ರವಾದಿಯೊಂದಿಗೆ ಪ್ರಶ್ನಿಸಿದಾಗ ಗ್ರಹಣಗಳು ಶುಭ-ಅಶುಭ ಸೂಚಕವಲ್ಲ ಎಂದು ಹೇಳಿದುದನ್ನು ಧರ್ಮ ಗುರುಗಳು ವಿವರಿಸಿದರು. ಗ್ರಹಣ ನಮಾಝ್‍ನಲ್ಲಿ ಹೆಚ್ಚಿನ ಭಕ್ತಾದಿಗಳು ಪಾಲ್ಗೊಂಡಿದ್ದರು.