ಗೋಣಿಕೊಪ್ಪ ವರದಿ, ಫೆ. 3: 8ನೇ ರಾಷ್ಟ್ರೀಯ ಬಾಲಕಿಯರ ಸಬ್ ಜೂನಿಯರ್ ಪಂದ್ಯಾವಳಿಯಲ್ಲಿ ಗೆಲುವು ಪಡೆದು ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದೆ. ಅಸ್ಸಾಂನ ಕಾಲಿಬೊರ್ ಮೈದಾನದಲ್ಲಿ ನಡೆಯುತ್ತಿರುವ 8ನೇ ನ್ಯಾಷನಲ್ ಸಬ್ ಜೂನಿಯರ್ ಚಾಂಪಿಯನ್ಶಿಪ್ ಟೂರ್ನಿಯ ಲೀಗ್ ಹಂತದ 3 ನೇ ಪಂದ್ಯವನ್ನು ಹಾಕಿಕೂರ್ಗ್ ಬಾಲಕಿಯರ ಸಬ್ ಜೂನಿಯರ್ ತಂಡವು ಗೆದ್ದುಕೊಂಡಿತು. ಮುಂಬಯಿ ಸ್ಕೂಲ್ಸ್ ಸ್ಪೋಟ್ರ್ಸ್ ಅಸೋಸಿಯೇಷನ್ಸ್ ವಿರುದ್ಧ 5-0 ಗೋಲುಗಳ ಜಯ ಗಳಿಸಿ ಸಾಧನೆ ಮಾಡಿತು. ಕಾವ್ಯ 21 ಹಾಗೂ 29ನೇ ನಿಮಿಷಗಳಲ್ಲಿ 2 ಗೋಲು ಹೊಡೆದರು. 7ನೇ ನಿಮಿಷದಲ್ಲಿ ಕೆ. ಎಸ್. ಅನ್ನಪೂರ್ಣ, 52 ರಲ್ಲಿ ಪಿ. ಶಿಲ್ಪ, 62ರಲ್ಲಿ ಪಿ. ಯು. ರಮ್ಯ ತಲಾ ಒಂದೊಂದು ಗೋಲು ಹೊಡೆದರು. ತಾ. 5 ರಂದು ಸೆಮಿಫೈನಲ್ ಪಂದ್ಯಾಟವು ಉತ್ತರಾಖಂಡ್ ತಂಡದ ನಡುವೆ ನಡೆಯಲಿದೆ.
(ಮೊದಲ ಪುಟದಿಂದ) ಸಬ್ ಜೂನಿಯರ್ ಕೂರ್ಗ್ ತಂಡದಲ್ಲಿ ಹೆಚ್.ಡಿ. ನೇತ್ರಾವತಿ, ಎಂ.ಕೆ. ಸುಜಾತ, ಕೆ.ಎಸ್. ಅನ್ನಪೂರ್ಣ, ಡಿ.ಜೆ. ನವ್ಯ, ಶಯಾ ಕಾವೇರಮ್ಮ, ಹೆಚ್.ಎ. ಅಪ್ಸರಾ, ಪಿ.ಓ. ಶಿಲ್ಪ, ಎಸ್. ಅದಿರಾ, ಕೆ.ಎಸ್. ಸುರಕ್ಷಾ, ಕೆ.ಕೆ. ಗೌತಮಿ, ಕೆ.ಎ. ಪಾರ್ವತಿ, ಪಿ.ಯು. ರಮ್ಯ, ಜಿ. ಕಾವ್ಯ, ಹೆಚ್. (ಮೊದಲ ಪುಟದಿಂದ) ಸಬ್ ಜೂನಿಯರ್ ಕೂರ್ಗ್ ತಂಡದಲ್ಲಿ ಹೆಚ್.ಡಿ. ನೇತ್ರಾವತಿ, ಎಂ.ಕೆ. ಸುಜಾತ, ಕೆ.ಎಸ್. ಅನ್ನಪೂರ್ಣ, ಡಿ.ಜೆ. ನವ್ಯ, ಶಯಾ ಕಾವೇರಮ್ಮ, ಹೆಚ್.ಎ. ಅಪ್ಸರಾ, ಪಿ.ಓ. ಶಿಲ್ಪ, ಎಸ್. ಅದಿರಾ, ಕೆ.ಎಸ್. ಸುರಕ್ಷಾ, ಕೆ.ಕೆ. ಗೌತಮಿ, ಕೆ.ಎ. ಪಾರ್ವತಿ, ಪಿ.ಯು. ರಮ್ಯ, ಜಿ. ಕಾವ್ಯ, ಹೆಚ್. ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡ ಲೀಗ್ನ ಮೊದಲ ಪಂದ್ಯದಲ್ಲಿನ ಸೋಲು ನಿರಾಸೆ ಮೂಡಿಸಿದೆ. ಹಾಕಿ ಜಾರ್ಖಂಡ್ ವಿರುದ್ಧ 0-1 ಗೋಲುಗಳಿಂದ ಸೋಲನುಭವಿಸಿತು.
ಆಲ್ ಇಂಡಿಯಾ ಯೂನಿವರ್ಸಿಟಿ ವಿರುದ್ಧ 2ನೇ ಪಂದ್ಯವಾಡಲಿದೆ. ತಂಡದಲ್ಲಿ ಕುಮುದಾ, ಪ್ರೇಮ, ಮಂಜುಳ, ನಿವೇದಿತಾ, ಅಂಜಲಿ, ಕಾದಂಬರಿ, ಕವನ, ಹರಿಣಾಕ್ಷಿ, ಟೀನಾ, ರಂಜಿತಾ, ಅಭಿನಾಶ್ರೀ, ಚಿತ್ರಶ್ರೀ, ಸುಮನ್, ದ್ರುತಿ, ಮಿಲನಾ, ದೇವಿ, ಅವಿನಾಶ್ರೀ ಮತ್ತು ಪೂಜಿತಾ ತಂಡದಲ್ಲಿದ್ದಾರೆ. ತರಬೇತು ದಾರರಾಗಿ ಬುಟ್ಟಿಯಂಡ ಚೆಂಗಪ್ಪ, ವ್ಯವಸ್ಥಾಪಕಿಯಾಗಿ ಅಕ್ಷಯಾ ಕಾರ್ಯನಿರ್ವಹಿಸುತ್ತಿದ್ದಾರೆ.