ಮಡಿಕೇರಿ, ಫೆ. 2: ಕೊಡವ ಐರಿ ಕುಟುಂಬಗಳ ಮಧ್ಯೆ ನಡೆಯುವ ಆರನೇ ವರ್ಷದ ಕ್ರಿಕೆಟ್ ಪಂದ್ಯಾಟಕ್ಕೆ ಈ ಬಾರಿ ಮರಗೋಡುವಿನ ಐಮಂಡ ಕುಟುಂಬಸ್ಥರು ಆತಿಥ್ಯ ವಹಿಸಿದ್ದು, ಏಪ್ರಿಲ್ ತಿಂಗಳ 20, 21 ಮತ್ತು 22 ರಂದು ಮೂರ್ನಾಡಿನ ದಿ. ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರಿಕೆಟ್ ಪಂದ್ಯಾಟದ ಲಾಂಛನವನ್ನು ಅಂತಾರ್ರಾಷ್ಟ್ರೀಯ ಚಿತ್ರಕಲಾವಿದ ಐಮಂಡ ರೂಪೇಶ್ ನಾಣಯ್ಯ ವಿನ್ಯಾಸಗೊಳಿಸಿದ್ದು, ಮಡಿಕೇರಿ ಪತ್ರಿಕಾಭವನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ತಾ. 3ರಂದು (ಇಂದು) ಮಧ್ಯಾಹ್ನ 2.30ಕ್ಕೆ ಲಾಂಛನ ಅನಾವರಣಗೊಳಿಸಲಿದ್ದಾರೆ.